ಸೆಪ್ಟೆಂಬರ್ 6ರಂದು ದೇವನಹಳ್ಳಿಯ ಸಾದಳ್ಳಿ ಬಳಿ ಜೆ.ಡಿ.ಗಾರ್ಡನ್ ವಿಲ್ಲಾವೊಂದರಲ್ಲಿ ಡ್ರಗ್ಸ್ ಪಾರ್ಟಿ ನಡೆದಿತ್ತು. ಹತ್ತಾರು ಜನ ಮೋಜು-ಮಸ್ತಿಲಿ ತೊಡಗಿದ್ದರು. ಸಿಸಿಬಿ ಪೊಲೀಸರು ಉದ್ಯಮಿ ಅಂಕಿತ್ ಜೈನ್ ಸೇರಿ 8ಜನರನ್ನು ಬಂಧಿಸಿದ್ದಾರೆ. ಜೇಡಿ -735 ವಿಲ್ಲಾ ಮಾಲೀಕ ಶ್ರೀನಿವಾಸ್ ಸುಬ್ರಮಣ್ಯಂ 9ಜನರ ವಿರುದ್ದ ಎಫ್ ಐಆರ್ ದಾಖಲಾಗ್ತಿದ್ದಂತೆ ಮಾಲೀಕ ಶ್ರೀನಿವಾಸ್ ಸುಬ್ರಮಣ್ಯಂ ಎಸ್ಕೇಪ್ ಆಗಿದ್ದಾನೆ.
ರೇವ್ ಪಾರ್ಟಿ ಆಯೋಜಕ ವಿಲ್ಲಾ ಮಾಲೀಕ ಶ್ರೀನಿವಾಸ್ ಸುಬ್ರಮಣ್ಯಂ ಹಿಂದೆ ಸ್ಯಾಂಡಲ್ವುಡ್ ಡ್ರಗ್ ಕೇಸ್ ನಲ್ಲಿ ಬಂಧಿತನಾಗಿದ್ದ. ಬಳಿಕ ಆತನ ಬಳಿ ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾಗಿತ್ತು. ಆದ್ರೆ ಜೇಡಿ ವಿಲ್ಲಾದಲ್ಲಿ ಸಿಸಿಬಿ ಪೊಲೀಸರು ಮಾದಕ ವಸ್ತು ಪತ್ತೆ ಬಗ್ಗೆ ಎಫ್ ಐಆರ್ ನಲ್ಲಿ ಯಾವುದೇ ಉಲ್ಲೇಖವಿಲ್ಲ.
ರೇವ್ ಪಾರ್ಟಿಲಿ ವಿದೇಶಿ ಲಲನೆಯರ ವೇಶ್ಯಾವಾಟಿಕೆ ನಡೆಸಲಾಗಿತ್ತು ಎನ್ನಲಾಗಿದೆ.
ವಿಸಾ-ಪಾಸ್ಪೋರ್ಟ್ ಇಲ್ಲದ 6 ಜನ ಯುವತಿಯರನ್ನ ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅದೇನೆ ಇರಲಿ, ಸದ್ಯ ದೇವನಹಳ್ಳಿ ಏರ್ಪೋರ್ಟ್ ಸಮೀಪ ಡ್ರಗ್ಸ್ ಪಾರ್ಟಿ ಸಖತ್ ಆಗಿ ಸಾಗ್ತಿವೆ. ಪ್ರಭಾವಿಗಳ ಪುತ್ರರು ರೇವ್ ಪಾರ್ಟಿಲಿ ಭಾಗಿಯಾಗಿದ್ದಾರೆ. ಸದ್ಯ 8ಜನರನ್ನ ವಶಕ್ಕೆ ಪಡೆದ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
PublicNext
17/09/2022 01:07 pm