ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದೇಶಿ ಡ್ರಗ್ ಪ್ರಜೆಗಳ ಬಂಧನ : 9 ಲಕ್ಷ ಮೌಲ್ಯ ವಿದೇಶಿ ಡ್ರಗ್ ಸೀಜ್

ಬೆಂಗಳೂರು: ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಕಾರ್ಯಾಚರಣೆ ನಡೆಸಿ ಸಿಂಥೆಟಿಕ್ ಡ್ರಗ್ ಮಾರಾಟ ಮಾಡುತ್ತಿದ್ದ ವಿದೇಶಿ ಪೆಡ್ಲರ್ಸ್ ಬಂಧಿಸಿದ್ದಾರೆ. ಬಂಧಿತರಿಂದ 09 ಲಕ್ಷ ಮೌಲ್ಯದ 82 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್ ಸೀಜ್ ಮಾಡಲಾಗಿದೆ.

ಕಾಲೇಜು ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡು ಆರೋಪಿಗಳು ಡ್ರಗ್ ಸಪ್ಕೈ ಮಾಡ್ತಿದ್ರು. ಒಂದು ಗ್ರಾಂ MDMA ಕ್ರಿಸ್ಟಲ್ ಗೆ 8 ರಿಂದ 10 ಸಾವಿರಕ್ಕೆ ಮಾರಾಟ ಮಾಡ್ತಿದ್ರು ಎಂದು ಹೇಳಲಾಗ್ತಿದೆ. ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ ಬಂದು ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ಆರೋಪಿಗಳು, ಡ್ರಗ್ ಪೆಡ್ಲಿಂಗ್ ಫುಲ್ ಟೈಮ್ ಜಾಬ್ ಮಾಡಿಕೊಂಡಿದ್ರು.

ಬಂಧಿತರ ವಿರುದ್ದ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪೂರ್ವಪರತೆ ವಿಚಾರಣೆ ಮಾಡ್ತಿದ್ದಾರೆ.

Edited By : Suman K
PublicNext

PublicNext

22/10/2024 03:52 pm

Cinque Terre

11.76 K

Cinque Terre

0

ಸಂಬಂಧಿತ ಸುದ್ದಿ