ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಕಂದವಾರ ರಸ್ತೆ ಅವ್ಯವಸ್ಥೆ- ಮಣ್ಣಿನಲ್ಲಿ ಹೂತುಹೋದ ಟಿಪ್ಪರ್ ಲಾರಿ

ಬೆಂಗಳೂರು: ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.ರಸ್ತೆಯಲ್ಲೇ ಟಿಪ್ಪರ್ ಲಾರಿ ಮಣ್ಣಿನಲ್ಲಿ ಹೂತು ಹೋಗಿದೆ.

ಕೋಡಿ ನೀರು ರಸ್ತೆ ಮೇಲೆ ಹರಿದು ರಸ್ತೆ ಕೊಚ್ಚಿ ಹೋದರೂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂದಿದ್ದಾರೆ. ಇನ್ನು ಕೊಚ್ಚಿ ಹೋದ ರಸ್ತೆಯಲ್ಲಿ ವಾಹನ ಸವಾರರು ನಿತ್ಯ ಪರದಾಟ ನಡೆಸ್ತಿದ್ದಾರೆ. ಇದೆಲ್ಲವನ್ನು ಕಂಡು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.

ಇನ್ನು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರದಲ್ಲಿ ಈ ಅವ್ಯವಸ್ಥೆ ಕೇಳುವವರಿಲ್ಲ.ಕೂಡಲೇ ಕಂದವಾರ ರಸ್ತೆ ಸರಿಪಡಿಸುವಂತೆ ಸ್ಥಳೀಯರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Edited By : Somashekar
PublicNext

PublicNext

15/09/2022 03:09 pm

Cinque Terre

33.76 K

Cinque Terre

0

ಸಂಬಂಧಿತ ಸುದ್ದಿ