ಬೆಂಗಳೂರು: ಹೊಸಕೆರೆ ಬಳಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.ಕಟ್ಟಡದ ಪ್ಲಾಸ್ಟರಿಂಗ್ ಕೆಲಸ ಮಾಡುವ ವೇಳೆ ಮರ ಮುರಿದು ಕಾರ್ಮಿಕರು ಮೂರು ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾರೆ.
ಗಾಯಾಳುಗಳ ಕುಟುಂಬಸ್ಥರು ಮಾಲೀಕರ ಬೇಜವಾಬ್ದಾರಿ ಅನ್ನೊ ಆರೋಪ ಮಾಡಿದ್ದು, ಮುಂಜಾಗ್ರತಾ ವಹಿಸದೆ ಕಾರ್ಮಿಕರು ಕೆಲಸಮಾಡ್ತಿದ್ರು ಎಂದು ತಿಳಿದು ಬಂದಿದೆ.
ಮೂವರ ಸ್ಥಿತಿ ತೀವ್ರ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ಕಾರ್ಮಿಕರನ್ನ ದಾಖಲು ಮಾಡಲಾಗಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
29/09/2022 12:00 pm