ದೊಡ್ಡಬಳ್ಳಾಪುರ : ಒಳಾಂಗಣ ಕ್ರೀಡಾಂಗಣದ ಪೇಂಟಿಂಗ್ ಮಾಡುವ ಸಮಯದಲ್ಲಿ 40 ಆಡಿಯಿಂದ ಬಿದ್ದ ಪೇಂಟರ್ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣ ಹಿಂಭಾಗದ ತಾಲೂಕು ಆಫೀಸರ್ಸ್ ಅಸೋಸಿಯೇಷನ್ ನಲ್ಲಿ ನಡೆದಿದೆ.
ಇಂದು ಒಳಾಂಗಣ ಕ್ರೀಡಾಂಗಣಕ್ಕೆ ಪೇಂಟಿಂಗ್ ಮಾಡುವ ಸಂದರ್ಭದಲ್ಲಿ 40 ಅಡಿ ಮೇಲಿಂದ ಬಿದ್ದು ಪೇಂಟರ್ ಸಾವನ್ನಪ್ಪಿದ್ದಾನೆ, ಘಟನೆಯಲ್ಲಿ ಮಧುಗಿರಿ ಮೂಲದ 25 ವರ್ಷದ ಪ್ರಸನ್ನ ಕುಮಾರ್ ಸಾವನ್ನಪ್ಪಿದ್ದಾನೆ.
ಕಳೆದ ಹದಿನೈದು ದಿನಗಳಿಂದ ಶೆಟಲ್ ಕಾಕ್ ಒಳಾಂಗಣ ಕ್ರೀಡಾಂಗಣದ ಪೇಂಟಿಂಗ್ ಕೆಲಸ ಮಾಡಲಾಗುತ್ತಿತ್ತು, ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮೃತ ಪ್ರಸನ್ನ ಕುಮಾರ್ ಕ್ರೀಡಾಂಗಣದ ಮೇಲೆ ನಿಂತು
ಪೇಂಟಿಂಗ್ ಮಾಡುವ ಸಮಯದಲ್ಲಿ ಸಿಮೆಂಟ್ ಶೀಟ್ ಮುರಿದಿದ್ದರಿಂದ ಕೆಳಗೆ ಬಿದ್ದಿದ್ದಾನೆ, ತೀರ್ವವಾಗಿ ಗಾಯಗೊಂಡಿದ್ದ ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡುವ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾನೆ.
ಕಳೆದೊಂದು ತಿಂಗಳಲ್ಲಿ ನಗರದಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ಕಟ್ಟಡ ನಿರ್ಮಾಣದಲ್ಲಿ ಸುರಕ್ಷಿತ ಮಾನದಂಡ ವಹಿಸದೆ ಇರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ.
PublicNext
24/08/2022 07:59 pm