ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿ ರಸ್ತೆ ಅಪಘಾತದಲ್ಲಿ IES ಅಧಿಕಾರಿ ಸಾವು

ದೇವನಹಳ್ಳಿ : ಕಾರುಚಾಲಕನ ಅತಿವೇಗ & ಬೈಕ್ ಚಾಲಕನ ಅಜಾಗರೂಕತೆಯಿಂದ ಆಗಸ್ಟ್ 21ರ ಮುಂಜಾನೆ 4ಗಂಟೆ ಸುಮಾರಿಗೆ ದೇವನಹಳ್ಳಿಯ ದೊಡ್ಡಬಳ್ಳಾಪುರ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತವಾಗಿತ್ತು.

ಬೆಂಗಳೂರಿನಿಂದ ನಂದಿಗೆ ಹೋಗ್ತಿದ್ದ ಎನ್ಫೀಲ್ಡ್ ಬೈಕ್, ದೇವನಹಳ್ಳಿ ಕಡೆಯಿಂದ ದೊಡ್ಡಬಳ್ಳಾಪುರ ಕಡೆಗೆ ಹೋಗಲು ಬರ್ತಿದ್ದ ಕ್ವಾಲೀಸ್ (ಕಾರು) ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಬೈಕ್ ಸವಾರರು ಬೈಕ್ ನಿಂದ ಹಾರಿ ಹತ್ತು ಅಡಿ ದೂರದಲ್ಲಿ ಬಿದ್ದಿದ್ದರು. ಡಿಕ್ಕಿ ತೀವ್ರತೆಗೆ ಕ್ವಾಲೀಸ್ ನ ಮುಂಭಾಗ ಸಂಪೂರ್ವ ಜಖಂ ಆಗಿದೆ.

ಪಶ್ಚಿಮ ಬಂಗಾಳ ಮೂಲದ ಪ್ರತುಲ್ ಶರ್ಮಾ(28) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ಪ್ರತುಲ್ ಶರ್ಮಾ (Indian Engineer Services) ಯಲಹಂಕದಲ್ಲಿ ಸೇವೆಗೆ ಹಾಜರಾಗಿದ್ದರು. ಇನ್ನು ಮತ್ತೊಬ್ಬ ಬೈಕ್ ಸವಾರ ರಾಜೀವ್ ವೈಟ್ ಫೀಲ್ಡ್ ನ ಸಾಂಪ್ಟೇರ್ ಕಂಪನಿಯ ಉದ್ಯೋಗಿ. ಇಬ್ಬರು ನಂದಿಬೆಟ್ಟಕ್ಕೆ ತೆರಳುವ ವೇಳೆ ಅಪಘಾತ ನಡೆದಿದೆ. ಪ್ರತುಲ್ ಶರ್ಮ ಸಾವನ್ನಪ್ಪಿದರೆ, ರಾಜೀವ್ ಶಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತ ಸಂಬಂಧ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Edited By : Nagesh Gaonkar
PublicNext

PublicNext

23/08/2022 06:29 pm

Cinque Terre

33.1 K

Cinque Terre

0

ಸಂಬಂಧಿತ ಸುದ್ದಿ