ಆನೇಕಲ್: ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಬಳಿ ಲಾರಿ ಡಿಕ್ಕಿಯಾಗಿ ಗೂಡ್ಸ್ ಆಟೋದಲ್ಲಿದ್ದ ಮಹಿಳೆ ಆಟೋದಿಂದ ಕೆಳಗೆಬಿದ್ದು ಮೃತಪಟ್ಟಿದ್ದಾರೆ. ಪ್ರಮೀಳಾ(42) ಮೃತ ದುರ್ದೈವಿ.
ಘಟನೆಯಲ್ಲಿ ಬಾಲಕಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಳುಗಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಲ್ಸೇತುವೆ ಇಳಿಜಾರಿನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ, ಹಾಗೂ ಲಾರಿ ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Kshetra Samachara
22/08/2022 08:40 pm