ನೆಲಮಂಗಲ:ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಧರ್ಮಗುರುವೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬಳಿಯ ಕಂಬಾಳು ಗ್ರಾಮದ ಕೆರೆ ಏರಿ ಮೇಲೆ ನಡೆದಿದೆ.
ಘಟನೆಯಲ್ಲಿ ಹೀರಹಳ್ಳಿಯ ಸರ್ವ ಧರ್ಮ ಆಶ್ರಮದ 75 ವರ್ಷದ ಶ್ರೀಹರಿ ಜಗತ್ ಲಿಂಗ ಮಹಮ್ಮದ್ ರಸೂಲ್ ಶಾ ಖಾದ್ರಿ ಪೂರ್ಕರ್ ಸಾವನ್ನಪ್ಪಿದ ದುರ್ಧೈವಿ ಧರ್ಮಗುರುವಾಗಿದ್ದಾರೆ.
ರಾಮನಗರದಿಂದ ಧರ್ಮ ಪಾಠ ಮುಗಿಸಿ ವಾಪಸು ತೆರಳುವಾಗ ಈ ದುರ್ಘಟನೆ ನಡೆದಿದ್ದು ವಾಹನ ಚಲಾಯಿಸುತ್ತಿದ್ದ ಧರ್ಮಗುರು ಸಾವನ್ನಪ್ಪಿದ ಸುದ್ದಿ ಕೇಳಿ ಸಾವಿರಾರು ಭಕ್ತರು ಕಂಬನಿ ಮಿಡಿದಿದ್ದಾರೆ. ಸದ್ಯ ದಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಧರ್ಮ ಗುರುವಿನ ಶವ ಇರಿಸಲಾಗಿದ್ದು ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿರುತ್ತದೆ.
-ಸುಮಿತ್ರ ಪಬ್ಲಿಕ್ ನೆಕ್ಸ್ಟ್ ನೆಲಮಂಗಲ
Kshetra Samachara
08/08/2022 10:51 am