ದೊಡ್ಡಬಳ್ಳಾಪುರ: ದೇವರ ಪೂಜೆಗೆ ತೆಂಗಿನಕಾಯಿ ಕೀಳಲು ಹೋದಾಗ, ತೆಂಗಿನ ಮರದ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ನಿಂದ ವಿದ್ಯುತ್ ಸ್ಪರ್ಶಿಸಿ ಯುವಕ ಸಾವನ್ನಪ್ಪಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮನು(29) ಮೃತ ದುರ್ದೈವಿ ಯುವಕ. ತಮ್ಮ ತೋಟದ ತೆಂಗಿನ ಮರದಲ್ಲಿ ಗಣೆ (ಮರ ಹತ್ತಲು ಬಳಸುವ ಉಪಕರಣ) ಮೂಲಕ ತೆಂಗಿನ ಕಾಯಿ ಕೀಳಲು ಹೋದಾಗ ಸಮೀಪವೇ ಹಾದು ಹೋಗಿದ್ದ 11ಕೆ.ವಿ. ವಿದ್ಯುತ್ ಲೈನ್ ನಿಂದ ತಂತಿ ಸ್ಪರ್ಶಿಸಿದೆ.
ತೀವ್ರ ಅಸ್ವಸ್ಥನಾಗಿದ್ದ ಯುವಕನನ್ನು ಕೂಡಲೇ ಡಿ-ಕ್ರಾಸಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಆಸ್ಪತ್ರೆ ಎದುರು ಯುವಕನ ಮನೆಯವರು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.
ಮೃತ ಮನು ತೆಂಗಿನಕಾಯಿ ಕೀಳುವುದಕ್ಕೂ ಮೊದಲು ಸ್ನೇಹಿತರಿಗೆಲ್ಲ ಎಳನೀರು ಕಿತ್ತುಕೊಟ್ಟಿದ್ದರು. ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗಿದ್ದ ಮನು, ದೇವರ ಪೂಜೆಗೆ ತೆಂಗಿನಕಾಯಿ ಕೀಳಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
PublicNext
24/06/2022 01:24 pm