ದೊಡ್ಡಬಳ್ಳಾಪುರ: ಓವರ್ ಟೇಕ್ ಮಾಡುವ ಭರದಲ್ಲಿ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಾಲೂಕಿನ ಗೌರಿಬಿದನೂರು- ದೊಡ್ಡಬಳ್ಳಾಪುರ ರಸ್ತೆಯ ಮೇಲಿನನಾಯಕರಂಡಹಳ್ಳಿ ಘಟನೆ ನಡೆದಿದ್ದು, ಅಪಘಾತದಲ್ಲಿ ವಕೀಲರಾದ ಬಾಲಗಂಗಾಧರಯ್ಯ (61) ಅವರ ಕಕ್ಷಿದಾರರಾದ ಶಿವಶಂಕರಯ್ಯ (54) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಬಾಲಗಂಗಾಧರಯ್ಯ ಗೌರಿಬಿದನೂರಿನ ಇಂದಿರಾನಗರದ ನಿವಾಸಿ ಮತ್ತು ಮೃತ ಶಿಶಸಂಕರಯ್ಯ ಈಡಗೂರು ನಿವಾಸಿಗಳು. ಕೆಲಸ ನಿಮಿತ್ತ ಇವರು ದೊಡ್ಡಬಳ್ಳಾಪುರ ಕಡೇ ಯಿಂದ ಹಿಂದೂಪುರಕ್ಕೆ ಬೈಕ್ ನಲ್ಲಿ ಹೊರಟಿದ್ದರು.
ಓವರ್ ಟೇಕ್ ಮಾಡುವ ಭರದಲ್ಲಿ ಕಾರಿನ ಚಾಲಕ ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಸಹ ಪಲ್ಟಿ ಹೊಡೆದಿದ್ದು ಕಾರಿನಲ್ಲಿದ್ದವರಿಗೂ ಸಣ್ಣ ಪುಟ್ಟ ಗಾಯಾಗಳಾಗಿವೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
10/06/2022 06:51 pm