ಆನೇಕಲ್: ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸವಾರ ಮೃತಪಟ್ಟ ಘಟನೆ ಆನೇಕಲ್- ಚಂದಾಪುರ ಮುಖ್ಯರಸ್ತೆಯ ಮರಸೂರು ಆರ್ ಟಿಒ ಕಚೇರಿ ಬಳಿ ಸಂಭವಿಸಿದೆ. ನಿವೃತ್ತ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಮೃತಪಟ್ಟವರು.
ಇಂದು ಬೆಳಗ್ಗೆ ಕೆಲಸ ನಿಮಿತ್ತ ಆನೇಕಲ್ ರಸ್ತೆಯಲ್ಲಿ ಬರುವಾಗ ಸತ್ಯನಾರಾಯಣ ಅವರ ಬೈಕ್ ಗೆ ಕೆಟಿಎಂ ಡ್ಯೂಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ತಮಿಳುನಾಡು ಮೂಲದ 3 ಬೈಕಲ್ಲಿ ಬರುತ್ತಿದ್ದ ಯುವಕರ ತಂಡ ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಬಂದು ನಿವೃತ್ತ ಶಿಕ್ಷಕರ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ.
ರಸ್ತೆಯಲ್ಲೇ ಹಿರಿಯ ಜೀವ 30 ನಿಮಿಷ ಒದ್ದಾಡಿ ಪ್ರಾಣ ಬಿಟ್ಟಿದೆ. ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಹಾಗೂ ಪೊಲೀಸರು ಬಂದಿದ್ರೆ ಜೀವ ಉಳಿಸಬಹುದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಂತೂ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿಯಾಗಿದೆ. ಈ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
PublicNext
30/05/2022 09:57 pm