ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕುರಿ ತೊಳೆಯುವಾಗ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

ಬೆಂಗಳೂರು: ಕೆರೆಯಲ್ಲಿ ಕುರಿಗೆ ಸ್ನಾನ ಮಾಡಿಸುವ ವೇಳೆ ಕಾಲು ಜಾರಿಬಿದ್ದು ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಗುಡುವನಹಳ್ಳಿ ಕೆರೆಯಲ್ಲಿ ನಡೆದಿದೆ.

ದೇವನಹಳ್ಳಿಯ ದೊಡ್ಡತತ್ತಮಂಗಲ ಗ್ರಾಮದ ಸುರೇಶ್(28) ಮೃತ ದುರ್ದೈವಿಯಾಗಿದ್ದಾನೆ. ಮದ್ಯಾಹ್ನ ಯಲಿಯೂರು ಗೇಟ್ ಬಳಿ ಇರುವ ಗುಡುವನಹಳ್ಳಿ ಕೆರೆಯಲ್ಲಿ ಕುರಿಗೆ ಸ್ನಾನ ಮಾಡಿಸುವಾಗ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಗಂಟೆಗೂ ಹೆಚ್ಚು ಕಾಲ ಕೆರೆಯಲ್ಲಿ ಮೃತ ಸುರೇಶ್ ಶವವನ್ನು ಹುಡುಕಿ ಹೊರತೆಗೆದಿದ್ದಾರೆ.

ಸುರೇಶ್‌ನ ಕುಟುಂಬಸ್ಥರು ಪ್ರಥಮ ಚಿಕಿತ್ಸೆ ಮಾಡಿ ಬದುಕಿಸಲು ಪ್ರಯತ್ನಿಸಿದ್ದಾರೆ. ಆದರೆ ಆಗಲೇ ಸುರೇಶನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ವೇಳೆ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಹಿನ್ನಲೆ ವಿಜಯಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

30/05/2022 07:54 am

Cinque Terre

7.3 K

Cinque Terre

0

ಸಂಬಂಧಿತ ಸುದ್ದಿ