ಬೆಂಗಳೂರು: ಆಸ್ಪತ್ರೆಯಲ್ಲಿ ರೋಗಿಗಳ ಜೀವ ಉಳಿಸುವ ಡಾಕ್ಟರ್, ರಸ್ತೆಯಲ್ಲಿ ಬೈಕ್ ಸವಾರನ ಜೀವಕ್ಕೆಕುತ್ತು ತಂದಿರೋ ಘಟನೆ ನಾಗರಭಾವಿಯ ಕೆಕೆ ಲೇಔಟ್ ನಲ್ಲಿ ನಡೆದಿದೆ.
ಡಾಕ್ಟರ್ ಲಕ್ಷ್ಮೀ ಮಾಡಿದ ಎಡವಟ್ಟಿಗೆ ಅದೃಷ್ಟವಶಾತ್ ಸ್ವಲ್ಪದರಲೇ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರಿನಲ್ಲಿ ಬರ್ತಿದ್ದ ಲೇಡಿ ಡಾಕ್ಟರ್ ತನ್ನ ಅಜಾಗರೂಕತೆಯಿಂದ ಬೈಕ್ ಸವಾರ ಪ್ರಭಾಕರ್ ಮೇಲೆ ಕಾರು ಹತ್ತಿಸಿದ್ರು. ನಂತರ ಬೈಕ್ ಸವಾರ ವ್ಹೀಲ್ ನಡಿ ಸಿಲುಕಿದ್ರು. ಬ್ರೇಕ್ ಹಿಡಿಯದೆ ಆತನ ಮೇಲೆ ಕಾರು ಹತ್ತಿಸಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.. ಕಾರು ರೈಟ್ ಟರ್ನ್ ಮಾಡೋಕೆ ಹೋಗಿ ಬೈಕ್ ಚಾಲಕನ ಮೇಲೆ ಹತ್ತಿದೆ. ಸದ್ಯ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರೋ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದರೆ. ಇತ್ತ ಅಪಘಾತವೆಸಗಿದ ಡಾ.ಲಕ್ಷ್ಮೀಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.
PublicNext
23/05/2022 01:13 pm