ಬೆಂಗಳೂರು: ಯಲಹಂಕ ಸಮೀಪದ ಜಕ್ಕೂರು ಏರೋಡ್ರಮ್ ಪ್ಲೈಓವರ್ ಮೇಲೆ ಜಕ್ಕೂರಿನ ಗೋವಿಂದಪ್ಪ (44) ಎಂಬಾತ ಸಂಬಂಧಿಕರ ಮಗನಿಗೆ ಏರೋಡ್ರಮ್ ತೋರಿಸಲು ಬಂದಿದ್ದ. ಏರ್‌ಪೋರ್ಟ್ ಫ್ಲೈಓವರ್ ಮೇಲೆ ಮೊಪೆಡ್ ಬೈಕ್ ನಿಲ್ಲಿಸಿ ಸಂಜಯ್ ಎಂಬ ಬಾಲಕನಿಗೆ ಏರೋಡ್ರಮ್ ತೋರಿಸುತ್ತಿದ್ದ. ಈ ವೇಳೆ ಏರ್‌ಪೋರ್ಟ್ ಕಡೆಯಿಂದ ವೇಗವಾಗಿ ಬಂದ ಕಾರು ಮೊಪೆಡ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗೋವಿಂದಪ್ಪ ಫ್ಲೈ ಓವರ್ ಮೇಲಿಂದ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ಜಕ್ಕೂರು ಸರ್ಕಾರಿ ವೈಮಾನಿಕ ಶಾಲೆ ತರಬೇತಿ ಕೇಂದ್ರದ ಪಿಲ್ಲರ್ ನಂಬರ್ 47ರ ಬಳಿ ದುರಂತ ಸಂಭವಿಸಿದೆ. ಬಾಲಕ ಸಂಜಯ್(8) ಗೆ ಗಂಭೀರ ಗಾಯವಾಗಿದ್ದು, ಯಲಹಂಕ ಸಮೀಪದ ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಕಾರು ಚಲಾಯಿಸುತ್ತಿದ್ದ ವರುಣ್ ಎಂಬಾತನನ್ನು ಯಲಹಂಕ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಏರ್‌ಪೋರ್ಟ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ವೀಕ್ಷಣೆ ಮಾಡುತ್ತಿದ್ದ ಜನರನ್ನು ಗಮನಿಸದೇ ಇದ್ದದ್ದು ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತಕ್ಕೆ ಕಾರಣವಾದ ಕಾರಿನಲ್ಲಿ ಐವರು ಸ್ನೇಹಿತರ ಜೊತೆ ವರುಣ್ ಬರುತ್ತಿದ್ದ. ಜೆ.ಸಿ ನಗರದ ಮೆಡಿಕಲ್ ಕಂಪನಿಯೊಂದರಲ್ಲಿ ವರುಣ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ಬಾಬು, Public Next, ಯಲಹಂಕ, ಬೆಂಗಳೂರು
PublicNext
22/05/2022 01:12 pm