ಆನೇಕಲ್: ನಿಂತಿದ್ದ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಕೂಟರ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಜೂಜವಾಡಿ ಬಳಿ ನಡೆದಿದೆ.
ಸತೀಶ್ ಎಂಬವರಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು, ಇಂದು ಬೆಳಗ್ಗೆ ಸತೀಶ್ ಅವರು ಆನೇಕಲ್ ನ ಬೊಮ್ಮಸಂದ್ರ ಕಾರ್ಖಾನೆಗೆ ಕೆಲಸಕ್ಕೆ ಬರುವಾಗ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಕೂಟರ್ ನಲ್ಲಿ ಅಚಾನಕ್ ಬೆಂಕಿ ಕಾಣಿಸಿಕೊಂಡಿದೆ. ಆ ಕೂಡಲೇ ಅವರು ವಾಹನದಿಂದ ಇಳಿದು, ಬೆಂಕಿ ನಂದಿಸುವ ಕಾರ್ಯ ನಡೆಸಿದರೂ ವಾಹನದ ಹಿಂಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
PublicNext
30/04/2022 04:53 pm