ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸ್ಟಲ್ ನ ಆರನೇ ಮಹಡಿಯಿಂದ ಬಿದ್ದು ಉಂಗಾಡ  ಮೂಲದ  ವಿದ್ಯಾರ್ಥಿನಿ ಸಾವು.

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿಯ ಗೀತಂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ  ಹಾಸ್ಟೇಲ್ ನ ಆರನೇ  ಮಹಡಿಯಿಂದ ಬಿದ್ದು ಸಾವನಪ್ಪಿದ್ದಾರ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ.

ಮೃತ ಯುವತಿಯನ್ನು ಉಗಾಂಡ ದೇಶದ ಆಸಿನಾ ಉವಾಸೆ (24 ವರ್ಷ) ಎಂದು ಗುರುತಿಸಲಾಗಿದ್ದು, ಬಿಬಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಬುಧವಾರ ರಾತ್ರಿ ಒಣಗಿಸಲು ಹಾಕಿದ್ದ ಬಟ್ಟೆಯನ್ನು ತರಲು ಆರನೇ ಮಹಡಿಯನ್ನು ಹತ್ತಿದ್ದಾಗ, ಆಕಸ್ಮಿಕವಾಗಿ ಬಿದ್ದು ಸಾವನಪ್ಪಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆಯೇ ಕಾರಣವೆಂದು ಕೆರಳಿದ ವಿದ್ಯಾರ್ಥಿಗಳು ದಾಂಧಲೆ ಎಬ್ಬಿಸಿದೆ. ಕಲ್ಲು ತೂರಾಟ ನಡೆಸಿ‌ ಕಿಡಿಕಿಗಾಜುಗಳನ್ನು ಒಡೆದಿದ್ದು, ಡಿವೈಎಸ್ಪಿ ನಾಗರಾಜ್, ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆಂದು‌ ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದಷ್ಟೇ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು ವಿದ್ಯಾರ್ಥಿಗಳು ಪೊಲೀಸ್ ಠಾಣೆ ಮೇಟ್ಟಿಲೇರಿ ಸುದ್ದಿಯಾಗಿದ್ದ ವಿವಿ, ಈಗ ಮತ್ತೆ ವಿದ್ಯಾರ್ಥಿನಿಂದ ಸಾವಿನಿಂದ ಮತ್ತೆ ಸುದ್ದಿಗೆ ಬಂದಿದೆ.

Edited By : Nirmala Aralikatti
Kshetra Samachara

Kshetra Samachara

28/04/2022 09:48 am

Cinque Terre

4.07 K

Cinque Terre

0

ಸಂಬಂಧಿತ ಸುದ್ದಿ