ಆನೇಕಲ್ : ಆ ಏರಿಯಾದ ಜನರು ಎಂದಿನಂತೆ ಬೆಳಿಗ್ಗೆ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದ ಸಮಯ. ಆಗ ಇದ್ದಕ್ಕಿದ್ದಂತೆ ಏರಿಯಾದಲ್ಲಿ ಬಾರಿ ಗಾತ್ರದ ಸ್ಫೋಟದ ಶಬ್ದ ಕೇಳಿಸಿದೆ. ಆಗ ಜನ ಭಯದಿಂದ ಶಬ್ದ ಕೇಳಿ ಬಂದ ಕಡೆ ಹೋಗಿದ್ದಾರೆ. ಅಲ್ಲಿನ ಸ್ಪೋಟದ ತೀವ್ರತೆ ಕಂಡು ಆತಂಕಕ್ಕೊಳಗಾಗಿದ್ದಾರೆ, ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂತೀರಾ ಈ ಸ್ಟೋರಿ ನೋಡಿ
ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಸಂದ್ರ ಗ್ರಾಮದ ಆನಂದಮೂರ್ತಿ ನಗರದಲ್ಲಿ ಬೆಳಿಗ್ಗೆ ಸಿಲಿಂಡರ್ ಸ್ಪೋಟವೊಂದು ಸಂಭವಿಸಿದೆ.
ಬೆಳಿಗ್ಗೆ ನಿದ್ರೆಯಿಂದ ಎದ್ದ ಜನ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ ಆ ಸಮಯದಲ್ಲಿ ಹೋಮ್
ಅಪ್ಲೈಯನ್ಸಸ್ ವಸ್ತುಗಳು ಶೇಖರಣೆ ಮಾಡಿಟ್ಟಿದ್ದ ಗೊಡೌನ್ ನಲ್ಲಿ ಸಿಲಿಂಡರ್ ಸ್ಪೋಟವಾಗಿದೆ.
ಜಗದೀಶ್ ಎಂಬುವವರು ಈ ಗೋದಾಮನ್ನು ಬಾಡಿಗೆಗೆ ಪಡೆದು ಹೋಮ್ ಅಪ್ಲೈಯನ್ಸಸ್ ವಸ್ತುಗಳಾದ ಕುಕ್ಕರ್, ಮಿಕ್ಸಿ, ಸೇರಿದಂತೆ ಇನ್ನಿತರ ವಸ್ತುಗಳ ಜೊತೆ ಸಿಲಿಂಡರ್ ಗಳನ್ನು ಸಹ ಶೇಖರಣೆ ಮಾಡಿಟ್ಟಿದ್ದರು.
ಅಲ್ಲಿದ್ದ ಸಿಲಿಂಡರ್ ಒಂದರಲ್ಲಿ ಅನಿಲ ಸೋರಿಕೆಯಾಗಿದೆ ಇದನ್ನು ಗಮನಿಸದ ಗೋದಾಮಿನ ಮಾಲೀಲಕ ಜಗದೀಶ್ ಬೆಳಿಗ್ಗೆ ಬಂದು ಲೈಟ್ ಸ್ವಿಚ್ ಹಾಕಿದ್ದಾರೆ. ಆಗ ಸಿಲಿಂಡರ್ ಸ್ಪೋಟವಾಗಿ ಮನೆಯಲ್ಲಿನ ವಸ್ತುಗಳು ಹಾಗೂ ಗೊಡೌನ್ ಮೇಲ್ಛಾವಣಿ ಸಂಪೂರ್ಣ ಛಿದ್ರ ಛಿದ್ರವಾಗಿ ಮಾಲೀಕ ಜಗದೀಶ್ ಗಂಭೀರವಾಗಿ ಗಾಯಗೊಂಡು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೂ ಸಿಲಿಂಡರ್ ಸ್ಪೋಟದಿಂದಾಗಿ ಅಕ್ಕ ಪಕ್ಕದಲ್ಲಿನ ಅಪಾರ್ಟ್ಮೆಂಟ್ ನ ಪ್ಲಾಟ್ ಗಳ ಕಿಟಕಿ ಗ್ಲಾಸ್ ಗಳು ಸಂಪೂರ್ಣ ಛಿದ್ರ ಛಿದ್ರವಾಗಿವೆ. ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ನಾಲ್ಕೈದು ಕಾರುಗಳು ಜಖಂ ಆಗಿದ್ದು, ಸ್ಪೋಟದ ತೀವ್ರತೆಗೆ ಕೆಲಕಾಲ ಜನ ಆತಂಕಕ್ಕೊಳಗಾಗುವಂತೆ ಮಾಡಿತ್ತು. ಅಪಾರ್ಟ್ಮೆಂಟ್ ನ ಪ್ಲಾಟ್ ಗಳ ಗ್ಲಾಸ್ ಒಡೆದು ಹೋಗಿದ್ದರಿಂದ ಮನೆಗಳಲ್ಲಿನ ಜನರಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಪರಿಶೀಲನೆ ನಡೆಸಿ ದರು.
Kshetra Samachara
27/04/2022 11:03 pm