ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಸ್ ದುರಂತದಲ್ಲಿ ಗಾಯಗೊಂಡ ವಿದ್ಯಾರ್ಥಿ ಸಾವು : ಬಿಕ್ಕಿ ಬಿಕ್ಕಿ ಅತ್ತ ತಂದೆ

ಬೆಂಗಳೂರು: ಪಾವಗಡ ಬಸ್ ದುರಂತದಲ್ಲಿ ಗಾಯಗೊಂಡ ವಿದ್ಯಾರ್ಥಿ ಸಾವು. ಮಗನನ್ನು ಕಳೆದುಕೊಂಡ ತಂದೆ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನಿಜಕ್ಕೂ ಕರುಳು ಚುರ್ ಎನ್ನುವಂತಿದೆ.

ಹೌದು ಪಾವಗಡ ತಾಲೂಕಿನ ಪಳವಳ್ಳಿ ಬಸ್ ಅಪಘಾತವನ್ನು ಯಾರು ಮರೆಯುವಂತಿಲ್ಲ. ಸದ್ಯ ಇದೇ ಅಪಘಾತದಲ್ಲಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹೇಂದ್ರ (17) ಸಾವನ್ನಪ್ಪಿದ್ದಾರೆ.

ಶ್ರೀನಿವಾಸ್ ಮತ್ತು ಯಶೋಧಾ ದಂಪತಿ ಪುತ್ರ ಇಂದು ಇಹಲೋಕ ತ್ಯಜಿಸುತ್ತಿದ್ದಂತೆ ತಂದೆ ಆಸ್ಪತ್ರೆಯ ಮುಂದೆ ಅಗಲಿದ ಮಗನನ್ನು ನೆನೆದು ಗೋಳಾಡಿದ್ದಾರೆ.ಮದುವೆಯಾಗಿ 7 ವರ್ಷದ ಬಳಿಕ ಒಬ್ಬನೇ ಒಬ್ಬ ಮಗನನ್ನು ಪಡೆದಿದ್ದ ಈ ದಂಪತಿಗೆ ಈಗಾ ಬರಸಿಡಿಲು ಬಂಡಿದಂತ್ತಾಗಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಮೃತದೇಹ ಮರಣೋತ್ತರ ಪರೀಕ್ಷೆ ಬಳಿಕ ಕುಟುಂವಸ್ಥರಿಗೆ ಹಸ್ತಾಂತರ ಮಾಡಲಾಗುವುದು.

ಇದೇ ವೇಳೆ ಮೃತ ಬಾಲಕನ ತಂದೆ ಶ್ರೀನಿವಾಸ ಅಪಘಾತವಾದ ದಿನ ಕರಾಳತೆಯನ್ನು ವಿವರಿಸಿದ್ದಾರೆ.ನನ್ನ ಮಗನಿಗೆ ನಿಮ್ಹಾನ್ಸ್ ನಲ್ಲಿ ಸರಿಯಾದ ಟೈಮ್ ಗೆ ಬೆಡ್ ಕೊಟ್ಟಿದ್ದರೆ ನನ್ನ ಮಗ ಉಳಿತ್ತಿದ್ದ ಅಲ್ಲಿ ಸರಿಯಾದ ಟೈಮ್ ನಲ್ಲಿ ಬೆಡ್ ಸಿಗದೆ ಮತ್ತಿಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಮೊದಲೇ ನಿಮ್ಹಾನ್ಸ್ ನಲ್ಲಿ ನನ್ನ ಮಗನಿಗೆ ಚಿಕಿತ್ಸೆ ನೀಡಿದರೆ ಅವನು ಬದುಕುಳಿಯುತ್ತಿದ್ದ ಅವನ ಸಾವಿಗೆ ನಿಮ್ಹಾನ್ಸ್ ಆಸ್ಪತ್ರೆ ಬೆಡ್ ಕೊಡದೇ ನನ್ನ ಮಗನ ಸಾಯಿಸಿದ್ರು. ಬಡವರ ಮಕ್ಕಳಿಗೆ ಇಂತಹ ಪರಿಸ್ಥಿತಿ ಬರಬಾರದು. ಒಂದು ಗಂಟೆಯಾದ್ರೂ ಆಸ್ಪತ್ರೆಗೆ ಒಳಗೆ ತೆಗೆದುಕೊಳ್ಳದೇ ಸತಾಯಿಸಿದ್ರು ಇದ್ದಿದ್ದು ಒಬ್ಬನೇ ಮಗ ಸ್ವಾಮಿ ನಾನು ಇನ್ನಾರಿಗಾಗಿ ಬದುಕಲಿ ಎಂದು ಕಣ್ಣೀರಾಗಿದ್ದಾರೆ.

Edited By : Manjunath H D
PublicNext

PublicNext

26/03/2022 01:20 pm

Cinque Terre

31.3 K

Cinque Terre

1

ಸಂಬಂಧಿತ ಸುದ್ದಿ