ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಟೋ ಚಾಲಕನ ನಿರ್ಲಕ್ಷ್ಯಕ್ಕೆ ಮಗು ಬಲಿ

ಬೆಂಗಳೂರು: ನಗರದಲ್ಲೊಂದು ಹೃದಯ ವಿದ್ರಾವಕ ಘಟನೆ‌ ನಡೆದಿದೆ. ಗ್ಯಾಸ್ ಸಾಗಿಸುವ ಆಟೋ ಡ್ರೈವರ್ ನಿರ್ಲಕ್ಷ್ಯಕ್ಕೆ ಮಗು ಸಾವನ್ನಪ್ಪಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.

ಬಾಲಕಿ ತಾಯಿಯೊಂದಿಗೆ ರಸ್ತೆಯಲ್ಲಿ ಎಳನೀರು ಕುಡಿಯುತ್ತಿದ್ದ ವೇಳೆ ದುರ್ಘಟನೆ ನಡೆದಿದೆ‌. ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ಆಟೋ ಇಳಿದು ಬಂದಿದ್ದ. ಈ ವೇಳೆ ರಸ್ತೆ ಡೌನ್ ಇದ್ದ ಕಾರಣ ಮುಂದಕ್ಕೆ ಚಲಿಸಿದ ಆಟೋ ಮಗುವಿನ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನ ರಕ್ಷಿಸಲು ತಾಯಿ ಹರಸಾಹಸಪಟ್ಟರೂ ಮಗು ಬದುಕುಳಿಯಲಿಲ್ಲ.

ಆಟೋ ಮಗುವಿನ ಕುತ್ತಿಗೆ ಮೇಲೆ ಹರಿದಿದ್ದರಿಂದ ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಂದಮ್ಮ ಮೃತಪಟ್ಟಿದೆ. ನಾಲ್ಕು ವರ್ಷದ ಭುವನ ಸಾವನ್ನಪ್ಪಿರುವ ಬಾಲಕಿಯಾಗಿದ್ದು, ಕಾಮಕ್ಷಿಪಾಳ್ಯ ಸಂಚಾರ ಪೊಲೀಸರು ಆಟೋ ಚಾಲಕ ಧನಂಜಯನನ್ನು ಬಂಧಿಸಿದ್ದಾರೆ. ಈ ಘಟನೆ ಘೋರದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Edited By : Shivu K
PublicNext

PublicNext

20/03/2022 01:33 pm

Cinque Terre

44.17 K

Cinque Terre

2

ಸಂಬಂಧಿತ ಸುದ್ದಿ