ದೇವನಹಳ್ಳಿ: ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ಜಿಲ್ಲಾ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ವೇಳೆ ಬೆಂಗಳೂರು ಹೈದರಾಬಾದ್ ರಸ್ತೆ ದೇವನಹಳ್ಳಿಯ ಬೈಪಾಸ್ ಬಳಿ ಅಪಘಾತವಾಗಿದೆ. ಸಚಿವರ ವಾಹನ ಸಂಚಾರಕ್ಕೆ ರಸ್ತೆ ಸುಗಮಗೊಳಿಸುವ ವೇಳೆ ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಂಧ್ರ ಪ್ರದೇಶದ ಕದಿರಿಯ ದಂಪತಿ ರಾಮಚಂದ್ರಪ್ಪ ಮತ್ತು ಶಂಕರಮ್ಮ ಇಬ್ಬರ ಕಾಲುಗಳು ನಜ್ಜುಗುಜ್ಜಾಗಿವೆ.
ಮಧ್ಯಾಹ್ನ ಅಪಘಾತವಾದ ಕೂಡಲೇ ಜನರ ನೂಕುನುಗ್ಗಲು ಮತ್ತು ಗಲಾಟೆ ಕಂಡು ಆರೋಗ್ಯ ಸಚಿವರೇ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದಾರೆ. ಇಬ್ಬರು ಬೈಕ್ ಸವಾರರ ಕಾಲುಗಳಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆ ಮುಂದುವರೆಸಿ ಎಂದು ಆರೊಗ್ಯ ಸಚಿವ ಸುಧಾಕರ್ ಅವರು ವೈದ್ಯರಿಗೆ ಸೂಚನೆಯನ್ನು ನೀಡಿ ಮಾನವೀಯತೆ ಮರೆದಿದ್ದಾರೆ.
PublicNext
27/02/2022 07:17 pm