ಯಲಹಂಕ : ಪೇಂಟ್ ತುಂಬಿದ ಲಾರಿ ಚಾಲಕನ ಅಚಾತುರ್ಯದಿಂದ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು, ಆಟೊ ಮತ್ತು ಬೊಲೆರೋ ಗಾಡಿ ಜಖಂಗೊಂಡು ಆರು ಜನಕ್ಕೆ ಗಾಯಗಳಾಗಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ತೆಲಂಗಾಣ ರಾಜ್ಯದ ಸಿಕಿಂದರಾಬಾದ್ ನಿಂದ ಪೇಂಟ್ ತುಂಬಿದ್ದ ಮಹಿಂದ್ರ ಬೊಲೆರೋ ಗಾಡಿ ದೇವನಹಳ್ಳಿ ಬೆಂಗಳೂರು ರಸ್ತೆ ಯಲಹಂಕದ ವಿದ್ಯಾಶಿಲ್ಪ ಡೌನ್ಟ್ರಾಪ್ ಬಳಿಯ ಪ್ಲೈಓವರ್ ಮೇಲೆ ಚಲಿಸುತ್ತಿದ್ದಾಗ ಮುಂಜಾನೆ 4 ಗಂಟೆ ಸುಮಾರಿಗೆ ಅಪಘಾತವಾಗಿದ್ದು, ಗಾಡಿ ಪಲ್ಟಿಯಾದ ಪರಿಣಾಮ ಬಣ್ಣ ಪ್ಲೈಓವರ್ ರಸ್ತೆ ಮೇಲೆ ಬಿದ್ದು ಒಣಗಿರಲಿಲ್ಲ, ಆದ್ದರಿಂದ ಯಲಹಂಕ ಸಂಚಾರಿ ಪೊಲೀಸರು ಪ್ಲೈಓವರ್ ಮೇಲೆ ವಾಹನ ಸಂಚಾರ ರದ್ದುಗೊಳಿಸಿದ್ದರು.
ಇದರಿಂದ ದೇವನಹಳ್ಳಿ, ಯಲಹಂಕ ಕಡೆಗಳಿಂದ ಬೆಂಗಳೂರಿನತ್ತ ತೆರಳುವ ವಾಹನ ಸವಾರರು ಕೆಲಕಾಲ ತೊಂದರೆ ಅನುಭವಿಸಿದರು. ಬಣ್ಣ ಒಣಗಿದ ನಂತರ ವಾಹನ ಸಂಚಾರಕ್ಕೆ ಸಂಚಾರಿ ಪೊಲೀಸರು ಅನುವು ಮಾಡಿಕೊಟ್ಟರು..ಅಪಘಾತಕ್ಕೆ ಕಾರಣವಾದ ತೆಲಂಗಾಣದ ಬೊಲೆರೊ ಚಾಲಕನ ವಿರುದ್ಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/02/2022 12:16 pm