ಬೆಂಗಳೂರು : ಸಂಪ್ ಗೆ ಬಿದ್ದು ತಂದೆ ಮಗ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಸುಲ್ತಾನ್ ಪಾಳ್ಯದ ರಾಮಕೃಷ್ಣ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಸಂಪ್ ಕ್ಲೀನ್ ಮಾಡುವಾಗ ಕರೆಂಟ್ ಶಾಕ್ ಹೊಡೆದು ತಂದೆ ರಾಜು (36), ಸಾಯಿ (10) ಸಾವನ್ನಪ್ಪಿದ್ದಾರೆ. ಮೊದಲಿಗೆ ಸಂಪ್ ತೊಳೆಯಲು ತೆರಳಿದ್ದ ರಾಜುಗೆ ಕರೆಂಟ್ ಶಾಕ್ ಹೊಡೆದು ಜೋರಾಗಿ ಕಿರುಚುತ್ತಿದ್ದಂತೆ ಓಡಿ ಬಂದ ಮಗ ಸೈನತ್ ಗೂ ಕರೆಂಟ್ ತಗುಲಿ ಸಾವನ್ನಪ್ಪಿದ್ದಾನೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಗೆ ಅಪಾರ್ಟ್ ಮೆಂಟ್ ಮಾಲೀಕರ ನಿರ್ಲಕ್ಷ್ಯ ಕಂಡು ಬಂದಿದ್ದು ಮಾಲೀಕರ ವಿರುದ್ಧ ಆರ್.ಟಿ.ನಗರ ಪೊಲೀಸರು ಕೇಸ್ ದಾಖಲಿಸಿದ್ದಾರೆ.
PublicNext
19/01/2022 05:42 pm