ಬೆಂಗಳೂರು : ಜಲ್ಲಿ ತುಂಬಿದ ಟಿಪ್ಪರ್ ಲಾರಿ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಆರು ಜನ ಸಾವನ್ನಪ್ಪಿ ಒಬ್ಬನ ಸ್ಥಿತಿ ಗಂಭೀರವಾದ ಘಟನೆ ಬೆಂಗಳೂರು ಮೈಸೂರು ರಸ್ತೆಯಲ್ಲಿ ಸಂಭವಿಸಿದೆ.
ಕುಂಬಳಗೋಡಿನ ಕಣಿಮಿಣಿಕೆ ಬಳಿ ಘಟನೆ ನಡೆದಿದ್ದು, ರಸ್ತೆ ಕಾಮಗಾರಿಯೇ ಅಪಘಾತ ಕ್ಕೆ ಕಾರಣ ಎನ್ನಲಾಗುತ್ತಿದೆ. ಎರಡು ಕಾರು, ಒಂದು ಬೈಕ್ ಮೇಲೆ ಜಲ್ಲಿ ತುಂಬಿದ ಲಾರಿ ಬಿದ್ದಿದೆ. ವೇಗವಾಗಿ ಬಂದ ಲಾರಿ ಕಂಟ್ರೋಲ್ ತಪ್ಪಿ ಪಲ್ಟಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು ಲಾರಿ ಪಲ್ಟಿಯಾದ ವೇಳೆ ಎರಡು ಕಾರ್ ಮತ್ತು ಬೈಕ್ ಜಖಂ ಗೊಂಡಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೈಸೂರು ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.
PublicNext
10/01/2022 08:41 pm