ಬೆಂಗಳೂರು : ಬೆಂಗಳೂರು ನಗರದ ಕೊಣನಕುಂಟೆ ಕ್ರಾಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿ ಪ್ರೆಸ್ಟೀಜ್ ಕಂಪನಿ ನಿರ್ಮಾಣಮಾಡುತ್ತಿದ್ದ ಮಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯ ರಭಸಕ್ಕೆ ಮಾಲ್ ಸುತ್ತ ದಟ್ಟ ಹೊಗೆ ಆವರಿಸಿದ್ದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ಸದ್ಯ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಕೊಟ್ಟಿದ್ದು ಬೆಂಕಿ ನಂದಿಸುವ ಕೆಲಸದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಿರತರಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
PublicNext
08/01/2022 01:41 pm