ರಾಮನಗರ : ವಿದ್ಯುತ್ ಪಸರಿಸಿ ಗುತ್ತಿಗೆ ನೌಕರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಶಿರಗನಹಳ್ಳಿ ಗ್ರಾಮದಲ್ಲಿ ನೆಡೆದಿದೆ. ಕುದೂರು ಸಮೀಪದ ಮಂದಾನಿಪಾಳ್ಯ ಮೂಲದ ಹೊನ್ನರಾಜು 33 ವರ್ಷ ಮೃತ ದುರ್ದೈವಿ. ಬಹಳ ವರ್ಷಗಳಿಂದ ಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ, ಟ್ರಾನ್ಸ್ ಪಾರ್ಮರ್ ದುರಸ್ತಿ ಕಾರ್ಯ ವೇಳೆ ಈ ಅವಘಡ ಸಂಭವಿಸಿದೆ.
ಇನ್ನು ಈ ಘಟನೆಗೆ ಅಜಾಗರೂಕತೆ ಮತ್ತು ಸುರಕ್ಷತಾ ಸಲಕರಣೆ ಬಳಸದಿರುವುದೇ ಕಾರಣ ಎನ್ನಲಾಗಿದೆ. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
05/01/2022 06:33 pm