ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅತ್ತಿಗುಪ್ಪೆ ಮನೆಯಲ್ಲಿ ಸಿಲಿಂಡರ್‌ ಸ್ಫೋಟ; 7 ಮಂದಿಗೆ ಗಾಯ, ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ತಿಗುಪ್ಪೆಯಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು 7 ಜನ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 8.40ರ ಸುಮಾರಿಗೆ ಅವಘಡ ‌ಸಂಭವಿಸಿದ್ದು, ಗಾಯಾಳುಗಳನ್ನು‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಲಿಂಡರ್ ಸ್ಫೋಟದ ಚಿತ್ರಣ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಅತ್ತಿಗುಪ್ಪೆ 2ನೇ ಕ್ರಾಸ್ ನಿವಾಸಿಗಳಾದ ಸುಕುಮಾರ್ (48), ಹರ್ಷಾ (41), ಗಾನಶ್ರೀ (13), ಹೇಮೇಶ್ವರ್-(7), ಮನೆ ಮಾಲೀಕರಾದ ರಾಮಕ್ಕ (65) ಸಹಿತ ಅನಿತಾ (31), ರಚನಾ (21) ಗಾಯಗೊಂಡವರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: ಶ್ರೀಮತಿ ಹರ್ಷಾ ಅವರು ಅಡುಗೆ ಕೋಣೆಗೆ ತೆರಳಿದಾಗ ಸಿಲಿಂಡರ್ ಸೋರಿಕೆ ಬಗ್ಗೆ ಗೊತ್ತಾಗಿದೆ. ತಕ್ಷಣ ಮನೆ ಸದಸ್ಯರು ಗಾಬರಿಯಾಗಿ ಹೊರಗೆ ಬಂದು ಅಡುಗೆ ಕೋಣೆ ಕಡೆಗೆ ಆತಂಕದಿಂದ ನೋಡುತ್ತಿದ್ದರು. ಬಿಲ್ಡಿಂಗ್ ನ 1ನೇ ಮಹಡಿಯಲ್ಲಿ ಮಾಲೀಕರಾದ ರಾಮಕ್ಕ ವಾಸವಿದ್ದರು. ಅವರೂ ಏನಾಯಿತೆಂದು ಹೊರಗೆ ಬಂದು ನೋಡುತ್ತಿರುವಾಗಲೇ ಸಿಲಿಂಡರ್ ಲೀಕೇಜ್ ಆಗಿದೆ.

ಈ ಗ್ಯಾಸ್ ಹರಡಿ, ದೇವರ ಕೋಣೆಯಲ್ಲಿ ಉರಿತಿದ್ದ ದೀಪಕ್ಕೆ ಸೋಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ಈ ತೀವ್ರತೆಗೆ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಮನೆ ಹೊರಗಿದ್ದವರ ಮುಖ, ತಲೆ, ಕೈಕಾಲುಗಳಿಗೆ ಸುಟ್ಟ ಗಾಯಗಳಾಗಿವೆ.

ಗಾಯಾಳುಗಳನ್ನು ಬಳಿಯ ESI ಮತ್ತು Victoria ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಂದ್ರ ಲೇಔಟ್ ಪೊಲೀಸರು ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

Edited By : Manjunath H D
PublicNext

PublicNext

04/01/2022 09:32 am

Cinque Terre

31.94 K

Cinque Terre

0

ಸಂಬಂಧಿತ ಸುದ್ದಿ