ಬೆಂಗಳೂರು: ಬನ್ನೇರುಘಟ್ಟಕ್ಕೆ ಬಂದಿದ್ದ ವಿದ್ಯಾರ್ಥಿಗಳು ರಸ್ತೆ ಅಪಘಾತದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಕೆಂಪನಾಯಕನಹಳ್ಳಿ ಸಮೀಪ ನಡೆದಿದೆ.
ಕೆಂಪನಾಯಕನಹಳ್ಳಿ ಸಮೀಪದ ಅಕ್ವೇರಲ್ ಗಾರ್ಮೆಂಟ್ಸ್ ಬಳಿ ನೆನ್ನೆ ಸಂಜೆ ನಡೆದಿರುವ ಘಟನೆ ಇದಾಗಿದ್ದು ಎಎಂಸಿ ಕಾಲೇಜಿನ ಬಿ ಎಂ ಎಚ್ ವಿದ್ಯಾರ್ಥಿ ಕೌಶಿಕ್ ಹಾಗೂ ಸುಷ್ಮಾ ಮೃತ ದುರ್ದೈವಿಗಳು.
ಮೃತ ಕೌಶಿಕ್ ಹಾಗು ಸುಷ್ಮಾ ಬೆಂಗಳೂರಿನ ಸಾರಕ್ಕಿ ನಿವಾಸಿಳಾಗಿದ್ದು ಬುಧವಾರ ಸಂಜೆ ಬನ್ನೇರುಘಟ್ಟಕ್ಕೆ ಊಟಕ್ಕೆಂದು ಬೈಕ್ ನಲ್ಲಿ ಬಂದಿದ್ದರು, ಊಟ ಮುಗಿಸಿ ವಾಪಸ್ ಬರುವ ವೇಳೆ ಕಂಟೇನರ್ ಹಿಂಬದಿಯಿಂದ ಡಿಕ್ಕಿ ಹೊಡೆದು ಬೈಕ್ ಸಮೇತ ಇಬ್ಬರನ್ನು ಎಳೆದುಕೊಂಡು ಬಂದಿದೆ.
ಇನ್ನು ಈ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ .
ಅಪಘಾತ ನಂತರ ಕಂಟೈನರ್ ಚಾಲಕ ಪರಾರಿಯಾಗಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/12/2021 08:29 pm