ನೆಲಮಂಗಲ: ಬೆಂಗಳೂರಿನ ಕೆಟ್ಟ ರಸ್ತೆಗಳು ಬಾಯ್ತೆರೆದು ನಿಂತಿರುವ ಗುಂಡಿಗಳು ತಿಂಗಳಲ್ಲಿ ಐದಾರು ಜನ ಅಮಾಯಕರ ಪ್ರಾಣಕ್ಕೆ ಸಂಚಕಾರ ತಂದೆ ತರುತ್ತವೆ ಎನ್ನುವುದು ಮತ್ತೆ ಸಾಬೀತಾಗಿದೆ.
ರಸ್ತೆಯಲ್ಲಿನ ಹಳ್ಳ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ದ್ವಿಚಕ್ರವಾಹನ ಸ್ಕಿಡ್ ಆಗಿ ಕೆಳಗೆ ಬಿದ್ದ ಪರಿಣಾಮ ಹಿಂಬದಿ ಸವಾರ ಮೇಲೆ ಟ್ಯಾಕ್ಟರ್ ಹರಿದು 15 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೆಲಮಂಗಲದ ರೇಣುಕಾ ನಗರದ ಬಳಿ ನಡೆದಿದೆ.ನೆಲಮಂಗಲ ತಾಲ್ಲೂಕು ಇಸ್ಲಾಂಪುರ ಗ್ರಾಮದ ಮೊಹ್ಮದ್ ಹ್ಯಾರಿಸ್ ಮೃತ ಬಾಲಕನಾಗಿದ್ದು,ದ್ವಿಚಕ್ರವಾಹನ ಚಾಲನೆ ಮಾಡ್ತಿದ್ದ ಮೊಹ್ಮದ್ ಅಲ್ತಾಫ್ ಕೊಂಚದರಲ್ಲೇ ಪಾರಾಗಿದ್ದಾನೆ
ಘಟನೆ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪಘಾತ ನಡೆಸಿದ ಟ್ರ್ಯಾಕ್ಟರ್ ಪೊಲೀಸರ ವಶದಲ್ಲಿದೆ
Kshetra Samachara
19/11/2021 02:28 pm