ಬೆಂಗಳೂರು: ಸೆಲ್ಫಿ ಹುಚ್ಚು ಒಮ್ಮೊಮ್ಮೆ ದೊಡ್ಡ ಅವಾಂತರಗಳಿಗೆ ಕಾರಣವಾಗುತ್ತೆ. ಡೇಂಜರ್ ಜಾಗಗಳಲ್ಲಿ ನಿಂತು ಸೆಲ್ಫಿ ತೆಗೆಯೋದು ಅಂದ್ರೆ ನಮ್ಮ ಯುವಜನರಿಗೆ ಅದೇನು ಷೋಕಿನೋ ಏನೋ. ಹೀಗೆ ನಡುರಾತ್ರಿ ವೇಳೆ ನಡುರಸ್ತೆಯಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸುವಾಗ ಇಬ್ಬರು ಪ್ರಾಣ ಸ್ನೇಹಿತರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ವಲಯದ ತಾವರೆಕೆರೆ ಫ್ಲೈ ಓವರ್ ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಹಾಗೂ ಮೂವರ ಸ್ಥಿತಿ ಗಂಭೀರವಾಗಿದೆ.
ದಿನೇಶ್(25) ವಿನಯ್ (25) ಮೃತಪಟ್ಟ ಯುವಕರಾಗಿದ್ದು ಅಂಕಿತ್ ಜನಾರ್ದನ್ ಹಾಗೂ ಜಾಸ್ಮಿನ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಮೃತರು ಮೂಲತಃ ವೈಟ್ ಫೀಲ್ಡ್ ನಿವಾಸಿಗಳು ಎಂದು ತಿಳಿದುಬಂದಿದೆ.
ತಾವರೆಕೆರೆಯ ಪ್ಲೈಓವರ್ ಮೇಲೆ ಎಲ್ಲಾ ಸ್ನೇಹಿತರು ವಾಹನ ನಿಲ್ಲಿಸಿ ಮಧ್ಯೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಹಿಂಬದಿಯಿಂದ ಬಂದಂತಹ ಹಾಲಿನ ವಾಹನ ಡಿಕ್ಕಿ ಹೊಡೆದಿರುವ ಪರಿಣಾಮ ಘಟನೆ ನಡೆದಿದೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Kshetra Samachara
14/11/2021 11:22 am