ಬಾಗಲಕೋಟೆ: ಮುಧೋಳ ತಾಲೂಕು ಜುನ್ನೂರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಹಾಗೂ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘದ ನೂತನ ಬೀಜ ದಸ್ತಾನು ಗೋದಾಮ ಉದ್ಘಾಟನೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ ಸಹಕಾರಿ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗಿದೆ. ಸಹಕಾರಿಗಳ ಸಹಕಾರಿಂದ ಇನ್ನಷ್ಟು ಬೆಳೆಯಬೇಕು ಎಂದು ಹೇಳಿದರು.
ಮುಖಂಡರಾದ ಸತೀಶ ಬಂಡಿವಡ್ಡರ , ಮಾಜಿ ಸಚಿವರಾದ ಎಸ್. ಆರ್. ಪಾಟೀಲ ಎಚ್ .ವೈ. ಮೇಟಿ , ಆರ್.ಬಿ.ತಿಮ್ಮಾಪುರ ,ಬಾಗಲಕೋಟೆ ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ನಂದಕುಮಾರ ಪಾಟೀಲ , ಪಿ ಕೆ ಪಿ ಎಸ್ ಜುನ್ನೂರ ಎಚ್.ಎಲ್.ಪಾಟೀಲ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ , ಅಧ್ಯಕ್ಷ ಮುಧೋಳ ಬ್ಲಾಕ್ ಕಾಂಗ್ರೆಸ್ ಧರಿಯಪ್ಪ ಸಾಂಗಲಿಕರ , ಅಧ್ಯಕ್ಷರು ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಶೋಕ ಕಿವಡಿ , ಜಿಲ್ಲಾ ಸಹಕಾರಿ ಯೂನಿಯನ್ ಬಾಗಲಕೋಟಿ ಅಧ್ಯಕ್ಷ ಕಾಶೀನಾಥ ಹುಡೇದ , ಶಿವಾನಂದ ಉದಪುಡಿ ಉಪಸ್ಥಿತರಿದ್ದರು.
Kshetra Samachara
08/10/2022 07:49 pm