ಬಾಗಲಕೋಟೆ: ಕಾಂಗ್ರೆಸ್ ಲಿಂಗಾಯತ ವಿರೋಧಿ ಪಕ್ಷವಲ್ಲ. ಎಲ್ಲ ಜಾತಿ ಜನಾಂಗಗಳ ಪಕ್ಷ ಎಂದು ಕೆಪಿಸಿಸಿ ವಕ್ತಾರ ಎಸ್.ಜಿ. ನಂಜಯ್ಯನಮಠ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕುರಿತು ಸಚಿವ ಡಾ. ಆರ್. ಸುಧಾಕರ್ ಹೇಳಿಕೆಯನ್ನು ಸಾರಾಸಗಾಟವಾಗಿ ತಳ್ಳಿಹಾಕಿದರು. ಸುಧಾಕರ್ ಅವರು ಕಾಂಗ್ರೆಸ್ ಆಡಳಿತದ ಇತಿಹಾಸ ತಿಳಿದು ಮಾತನಾಡಲಿ. ಬ್ರಾಹ್ಮಣ ಸಮಾಜಕ್ಕೆ ಸೇರಿದ ಪಿ.ವಿ. ನರಸಿಂಹರಾವ್ ಅವರನ್ನು ಕಾಂಗ್ರೆಸ್ ಪ್ರಧಾನಿ ಮಾಡಿದೆ. ಇದೇ ಬ್ರಾಹ್ಮಣ ಸಮಾಜಕ್ಕೆ ಸೇರಿದ ಗುಂಡುರಾಯರನ್ನು ಮುಖ್ಯಮಂತ್ರಿ ಮಾಡಿದೆ ಎಂದರು.
ಬಿ.ಡಿ ಜತ್ತಿ ಮುಖ್ಯಮಂತ್ರಿಯಾಗಿ, ಉಪರಾಷ್ಟ್ರಪತಿ, ಹಂಗಾಮಿ ರಾಷ್ಟ್ರಪತಿ ಆಗಿದ್ದಾರೆ. ಎಸ್. ನಿಜಲಿಂಗಪ್ಪ, ಎಸ್. ಆರ್. ಕಂಠಿ, ವೀರೇಂದ್ರ ಪಾಟೀಲ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದೆ ಕಾಂಗ್ರೆಸ್ ಎನ್ನುವ ಇತಿಹಾಸವನ್ನು ಸುಧಾಕರ್ ಅವರು ಅರಿಯಲಿ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್‌ನಲ್ಲೇ ಮುಖ್ಯಮಂತ್ರಿ ಕೇಂದ್ರ ಸಚಿವ, ರಾಜ್ಯಪಾಲರಾಗಿದ್ದರು ಎನ್ನುವುದನ್ನು ಸುಧಾಕರ್ ಮರೆಯಬಾರದು ಎಂದರು.
ಕಾಂಗ್ರೆಸ್ ಎಲ್ಲರಿಗೂ ಜಾತಿ ನೋಡದೇ ಸಾಮರ್ಥ್ಯ ನೋಡಿ ಅವಕಾಶ ನೀಡಿದೆ. ಆದರೆ ಇದುವರೆಗೆ ಬಿಜೆಪಿ ಆಗಲಿ ಜನತಾಪರಿವಾರವಾಗಲಿ ಹಿಂದುಳಿದ ವರ್ಗದವರಿಗೆ ಮುಖ್ಯಮಂತ್ರಿ ಅವಕಾಶ ನೀಡಿಲ್ಲ. ಜನತಾಪಕ್ಷದಲ್ಲಿ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಜೆ.ಎಚ್. ಪಟೇಲ್, ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಸಿಎಂ ಮಾಡಿದೆ. ಹಾಗೆ ಬಿಜೆಪಿ ಕೂಡ ಬರೀ ಮೇಲ್ವರ್ಗದವರನ್ನೇ ಸಿಎಂ ಮಾಡಿದೆ ಎಂದರು.
ಸಚಿವ ಸುಧಾಕರ್ ಅವರು ಒಂದನ್ನು ತಿಳಿದುಕೊಳ್ಳಲಿ, 40 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದು ಕಾಂಗ್ರೆಸ್ ಅಲ್ಲ. ಅದು ಗುತ್ತಿಗೆದಾರರ ಆರೋಪವಾಗಿ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಆ ಬಗ್ಗೆ ಸದನದ ಹೊರಗೆ ಮಾತನಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಣಿತಾ ಈಟಿ, ನಾಗರಾಜ್ ಹದ್ಲಿ, ಆನಂದ ಶಿಲ್ಪಿ, ಸಿಕಂದರ ಅಥಣಿ ಇದ್ದರು.
Kshetra Samachara
28/09/2022 12:50 pm