ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಬಕವಿ-ಬನಹಟ್ಟಿ: ಪ್ರಜಾಪ್ರಭುತ್ವದಲ್ಲಿ ಮತದಾರರೇ ಅಂತಿಮ - ಸಚಿವ ಆರ್.ಬಿ.ತಿಮ್ಮಾಪೂರ

ರಬಕವಿ-ಬನಹಟ್ಟಿ: ಮನುವಾದಿಗಳು ರಾಜಕೀಯ ಲಾಭ ಪಡೆದುಕೊಂಡಿದ್ದಾರೆ. ಹಾಗಾಗಿ ಯುವಕರು ರಾಜಕೀಯಕ್ಕೆ ಬರಬೇಕು, ಮತದಾರರ ಒಂದು ಮತದ ತಾಕತ್ತನ್ನ ತೋರಿಸಬೇಕು. ಅಂಬೇಡ್ಕರ್ ಕೊಟ್ಟ ಮತದಾನದ ಹಕ್ಕಿನಿಂದ ರಾಜಕಾರಣಿಗಳಾಗಿದ್ದಾರೆ. ಕಾರಣ ಮತದಾರರನ್ನು ಗಮನವಿರಿಸಿಕೊಳ್ಳಬೇಕಿತ್ತು ಎಂದು ಬಿಜೆಪಿಯನ್ನು ಸಚಿವ ಆರ್.ಬಿ.ತಿಮ್ಮಾಪೂರ ಕುಟುಕಿದರು.

ತೇರದಾಳ ಪಟ್ಟಣದ ಸರಕಾರಿ ಉರ್ದು ಪ್ರೌಢ ಶಾಲೆ ಮತ್ತು ದಿ.ತೇರದಾಳ ಮೈನಾರಿಟಿ ಸೂಸಾಯಿಟಿಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಎಂಎಲ್‍ಸಿ ಡಾ.ಉಮಾಶ್ರೀ ಮಾತನಾಡಿ, ಕ್ಷೇತ್ರದಲ್ಲಿ ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣದೊಂದಿಗೆ ಉನ್ನತ ಹುದ್ದೆಗೆರಬೇಕು. ಈ ನಿಟ್ಟಿನಲ್ಲಿ ಧರ್ಮ ಮತ್ತು ಭಾಷೆ ಜೊತೆಗೆ ಒಗ್ಗಟ್ಟಿರಬೇಕು. ಛಿದ್ರವಾದರೇ ಯಾವ ದೇಶವು ಮುನ್ನಡೆಯುವುದಿಲ್ಲ ಎಂದರು.

ವಕ್ಫ ಬೋರ್ಡ ರಾಜ್ಯಾಧ್ಯಕ್ಷ ಕೆ.ಅನ್ವರ ಪಾಷಾ, ಸಿದ್ದು ಕೊಣ್ಣೂರ, ತೌಪಿಕ್ ಪಾರ್ಥನಳ್ಳಿ, ದೇವಲ ದೇಸಾಯಿ ಮಾತನಾಡಿದರು. ವೇದಿಕೆಯಲ್ಲಿ ಸಮಾಜದ ಮುಖಂಡ ಇಸಾಕ ನಿಪ್ಪಾಣಿ, ಹಾಜಿ ದಸ್ತಗಿರಸಾಬ್, ರಫೀಕ್ ಬಾರಿಗಡ್ಡಿ, ಪ್ರವೀಣ ನಾಡಗೌಡ, ಡಾ.ಪದ್ಮಜೀತ ನಾಡಗೌಡಪಾಟೀಲ, ಸಮೀರ ಕಂಗನೊಳ್ಳಿ, ರಾಜು ನಂದೆಪ್ಪನವರ, ನಿಲೇಶ ದೇಸಾಯಿ, ಪುರಸಭೆ ಅಧ್ಯಕ್ಷೆ ಶಿಲ್ಪಾ ರೋಡಕರ, ಉಪಾಧ್ಯಕ್ಷ ನಸರಿನಬಾನು ನಗಾರ್ಜಿ ಸೇರಿದಂತೆ ಕಾಂಗ್ರೇಸ್ ಪಕ್ಷ, ಅಲ್ಪಸಂಖ್ಯಾತ ಮತ್ತು ಮುಸ್ಲಿಂ ಸಮಾಜದ ಹಿರಿಯರು, ಗಣ್ಯರು ಇದ್ದರು. 

Edited By : PublicNext Desk
PublicNext

PublicNext

14/12/2024 09:11 pm

Cinque Terre

4.4 K

Cinque Terre

0