ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟ: 3ನೇ ಯುನಿಟ್ ಅಭಿವೃದ್ದಿ ಕಾರ್ಯಕ್ಕೆ ಶೀಘ್ರದಲ್ಲಿಯೇ ಸಿಎಂ ಚಾಲನೆ

ಬಾಗಲಕೋಟ: ಯುನಿಟ್-3ರ ಅಭಿವೃದ್ದಿಗೆ ಸರಕಾರ 3000 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದು, ಅಭಿವೃದ್ದಿ ಕಾರ್ಯಕ್ಕೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಗಳು ಚಾಲನೆ ನೀಡಲಿದ್ದಾರೆಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸಭಾಭವನದಲ್ಲಿ ಸೋಮವಾರ ಯುನಿಟ್-1 ಹಾಗೂ 2ರಲ್ಲಿ ಮುಖ್ಯ ಸಂತ್ರಸ್ತರಿಗೆ ಹಾಗೂ ಇತರೆ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು ಮುಳುಗಡೆ ಸಂತ್ರಸ್ತರಿಗೆ ನಿವೇಶನ ನೀಡುವ ಸಲುವಾಗಿ ಯುನಿಟ್-3ರ ಅಭಿವೃದ್ದಿಗೆ ಸರಕಾರ ಅನುಮೋದನೆ ನೀಡಿದ್ದು, ದೀಪಾವಳಿ ಹಬ್ಬ ಮುಗಿದ ಮೇಲೆ ಬೆಳಿಗ್ಗೆ ಬಾಗಲಕೋಟೆ ಮಧ್ಯಾಹ್ನ ಜಮಖಂಡಿಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆಂದು ತಿಳಿಸಿದರು.

ಸಿವಿಲ್ ಮತ್ತು ಎಲೇಕ್ಟ್ರೀಕಲ್ ಕಾಮಗಾರಿ ಬೇರೆ ಬೇರೆ ಮಾಡಲಾಗುತ್ತಿದ್ದು, 50 ಸಾವಿರ ಎಕರೆ ನೀರಾವರಿ, ರಸ್ತೆ ಹಾಗೂ ಯುನಿಟ್-3ರ ಅಭಿವೃದ್ದಿಗೆ ಚಾಲನೆ ನೀಡಲಿದ್ದಾರೆ ಎಂದರು.

Edited By : Abhishek Kamoji
Kshetra Samachara

Kshetra Samachara

10/10/2022 04:28 pm

Cinque Terre

5.46 K

Cinque Terre

0