ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: 10ನೇ ದಿನಕ್ಕೆ ಕಾಲಿಟ್ಟ ಹೋರಾಟ; ಸೋಮವಾರ ಜಾನುವಾರು ಸಮೇತ ಪಾದಯಾತ್ರೆ

ಬಾಗಲಕೋಟೆ: ಹಲಕುರ್ಕಿ ರೈತರ ಭೂಸ್ವಾಧೀನ ವಿರೋಧಿ ಹೋರಾಟ 10 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಹೋರಾಟ ಸ್ಥಳಕ್ಕೆ ಎಎಪಿ ಮುಖಂಡರು ರೈತ ನಾಯಕರು ಭೇಟಿ ನೀಡಿ ಬೆಂಬಲ ವ್ಯಕ್ತ ಪಡಿಸಿದರು. ಈ ವೇಳೆ ಮುಖಂಡರಾದ ಮುತ್ತಪ್ಪ ಕೋಮಾರ, ಎಸ್. ಡಿ.ಜೋಗಿನ, ರಮೇಶ ಬದ್ನೂರ ಮಾತನಾಡಿ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತ ಪಡಿಸಿದರು.

ಹೋರಾಟ ಆರಂಭಗೊಂಡು 10 ದಿನ ಕಳೆದರೂ ಸರ್ಕಾರ ಭೂಸ್ವಾಧೀನ ಕೈಬಿಡುವ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಶೇ. 75ರಷ್ಟು ರೈತರು ಭೂಮಿ ಕೊಡಲು ಒಪ್ಪಿದ್ದಾರೆ ಎನ್ನುವ ಉದ್ಧಟತನದ ಮಾತು ಹೇಳುತ್ತಿದೆ. ಸರ್ಕಾರ ಸೋಮವಾರದೊಳಗಾಗಿ ಭೂಸ್ವಾಧೀನ ಕ್ರಮದಿಂದ ಹಿಂದೆ ಸರಿದು ಆದೇಶ ಹೊರಡಿಸದೇ ಇದ್ದಲ್ಲಿ, ಸೋಮವಾರ ಜಿಲ್ಲೆಯ ರೈತಪರ ಸಂಘಟನೆ ಮುಖಂಡರು, ಪಕ್ಷಾತೀತವಾಗಿ ಹಲಕುರ್ಕಿ ರೈತರ ಜತೆ ಸೇರಿ ಬಾದಾಮಿ ತಹಸೀಲ್ದಾರ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು. ಪಾದಯಾತ್ರೆಯಲ್ಲಿ ಕೇವಲ ಜನರಷ್ಟೆ ಅಲ್ಲ ಜಾನುವಾರುಗಳನ್ನು ಸಮೇತ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.

Edited By : Manjunath H D
Kshetra Samachara

Kshetra Samachara

29/09/2022 06:55 pm

Cinque Terre

52.82 K

Cinque Terre

0