ಬಾಗಲಕೋಟೆ: ಕೆರೂರ ಗಣೇಶೋತ್ಸವ ವೇಳೆ ಹಿಂದೂ ಯುವಕರ ಮೇಲಿನ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು (ಅ.10) ಜಿಲ್ಲಾಡಳಿತ ಭವನದ ಮುಂದೆ ಹಿಂಜಾವೇ ನಡೆಸಲು ಉದ್ದೇಶಿಸಿದ್ದ ಅಹೋರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಹಿಂಜಾವೇ ಮುಖಂಡ ಜಗದೀಶ್ ಕಾರಂತ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಭಾಗಶಃ ಈಡೇರಿಸಿದೆ. ಹಾಗಾಗಿ ನಾವು ಕೈಗೊಂಡ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ. ಕೆರೂರ ಹಾಗೂ ಜಿಲ್ಲೆಯ ಜನತೆಯ ನಮ್ಮ ಹೋರಾಟಕ್ಕೆ ನಿರೀಕ್ಷಿತ ಬೆಂಬಲ ನೀಡಿದ ಪರಿಣಾಮ ಸರ್ಕಾರ ನಮ್ಮ ಪ್ರಮುಖ ಬೇಡಿಕೆಗೆ ಸ್ಪಂದಿಸಿದೆ. ಈಗಾಗಲೇ ಸರ್ಕಾರ ಒಬ್ಬರ ಮೇಲೆ ಕ್ರಮ ಕೈಗೊಂಡಿದ್ದು, ಪೊಲೀಸ್ ಇಲಾಖೆಗೆ ಕಳಂಕ ತಂದಿರುವ ಪಿಎಸ್ಐ ಮತ್ತು ಇಬ್ಬರು ಸಿಬ್ಬಂದಿ ಮೇಲೆಯೂ ಕ್ರಮ ಆಗಬೇಕು. ಕೆರೂರ ಯುವಕರ ಬಂಧನ ವೇಳೆ ಪೊಲೀಸರು 10 ಸಾವಿರ ರೂಪಾಯಿ, ಬೆಳ್ಳಿ ಸಾಮಗ್ರಿಗಳನ್ನು ಇಲಾಖೆ ವಾಪಸ್ ಮಾಡಬೇಕು ಎಂದರು.
ಇದುವರೆಗಿನ ಸಂಘಟನೆ ಹೋರಾಟ ಪೊಲೀಸ್ ಇಲಾಖೆ ವಿರುದ್ಧ ಆಗಿರಲಿಲ್ಲ , ಅಮಾಯಕ ಯುವಕರ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗಳ ವಿರುದ್ಧದ ಹೋರಾಟವಾಗಿತ್ತು. ಇಲಾಖೆ ಬಗೆಗೆ ತಮಗೆ ಅಪಾರ ಗೌರವ ಇದೆ ಎಂದು ಅವರು ಹೇಳಿದರು.
PublicNext
10/10/2022 10:43 am