ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೌರ ಕಾರ್ಮಿಕರು ಸಮಾಜದ ಆರೋಗ್ಯ ಸುಧಾರಕರು : ಡಿಸಿ

ಬಾಗಲಕೋಟೆ: ಮಳೆ,ಚಳಿ,ಬಿಸಿಲೆನ್ನದೇ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಸ್ವಾಸ್ಥ ಸಮಾಜದ ಸುಧಾರಕರು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹೇಳಿದರು. ನಗರಸಭೆ ಆವರಣದಲ್ಲಿ ಶುಕ್ರವಾರ ಆಯೋಜಿ ಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಐತಿಹಾಸಿಕವಾಗಿ ಸ್ವಚ್ಚತಾ ಕಾರ್ಯ ಶೋಷಿತ ಜನಾಂಗ ಮಾಡುತ್ತಾ ಬಂದಿದ್ದು, ಇವರೆಲ್ಲಾ ನಾವೇ ಏಕೆ ಈ ಕಾರ್ಯ ಮಾಡಬೇಕೆಂದಿದ್ದರೆ ಸಮಾಜದ ಸ್ವಾಸ್ಥ ಕೇಡುತ್ತಿತ್ತು. ಆ ದೃಷ್ಠಿಯಲ್ಲಿ ಪೌರ ಕಾರ್ಮಿಕರು ಶಿಸ್ತಿನ ಸೈನಿಕರಂತೆ ತಮ್ಮ ಕಾರ್ಯ ನಿರ್ವಹಿಸುತ್ತಿರುವುದರಿಂದ ಸೈನಿಕರಿಗೆ ಸಿಗುವ ಗೌರವ ಇವರಿಗೂ ಸಿಗಬೇಕು ಎಂದರು.

ಯಾವ ವರ್ಗವೂ ಮತ್ತು ಕೆಲಸವು ಕೂಡಾ ಕನಿಷ್ಠವಲ್ಲ ಎಂಬ ಭಾವನೆಯಿಂದ ಪೌರ ಕಾರ್ಮಿಕರು ಬೆಳೆದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬುದು ನನ್ನ ಆಸೆಯಾಗಿದೆ ಎಂದು ಹೇಳಿದರು.

ಪೌರಕಾರ್ಮಿಕರ ಕಾರ್ಯವನ್ನು ಸರ್ಕಾರ ಗಮನಿಸುತ್ತಿದೆ. ನಿಮ್ಮ ಕಾರ್ಯಕ್ಕೆ ಗೌರವಯುತವಾದ ವ್ಯವಸ್ಥೆಗಳನ್ನು ಕಲ್ಪಿಸುವ ಚಿಂತನೆಯಿದ್ದು, ನಿಮಗೆ ಯಾವುದೇ ರೀತಿ ಕೊರತೆಯಾಗಬಾರದೆಂಬ ಉದ್ದೇಶ ಹೊಂದಿದೆ ಎಂದರು.

ಪೌರ ಕಾರ್ಮಿಕರಿಗೆ ವಸತಿ ಕಲ್ಪಿಸುವ ಉದ್ದೇಶವಿದ್ದು, ಖಾಯಂ ಅಲ್ಲದ ಮತ್ತು ನಿವೇಶನ ರಹಿತರಾದ ಕಾರ್ಮಿಕರಿಗೆ ವಸತಿ ಯೋಜನೆಯಲ್ಲಿ ಮನೆ ಕೊಡಲಾಗುವುದು. ಪೌರ ಕಾರ್ಮಿರು ತಮ್ಮ ಆರೋಗ್ಯ ಕಡೆ ಹೆಚ್ಚು ಗಮನ ಕೊಡಬೇಕು ಸಿ.ಎಮ್.ಸಿ ಅವರು ನೀಡಿದ ಪರಿಕರಗಳನ್ನು ಯಾರೂ ಉಪಯೋಗಿಸುತ್ತಿಲ್ಲ ಇದು ವಿಷಾದನೀಯವಾಗಿದೆ. ಕುಟುಂಬದ ಕಡೆ ಹೆಚ್ಚಿನ ಗಮನ ನೀಡಿ ದುಶ್ಚಟದಿಂದ ದೂರವಿದ್ದು, ಮಕ್ಕಳಿಗೆ ಉನ್ನತ ಶಿಕ್ಷಣನೀಡಬೇಕು ಅದಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಕಾರ ಕೂಡಾ ಮಾಡಲಾಗುವುದು ಎಂದರು.

ಪ್ರಾಸ್ಥಾವಿಕವಾಗಿ ಮಾತನಾಡಿದ ಪೌರಾಯುಕ್ತ ಆರ್.ವಾಸನ್ನ ಸಿಂಧೂನದಿಯ ನಾಗರಿಕತೆಯಿಂದ ಮುಂದೆ ಗುಪ್ತರ ಮೌರ್ಯರ ಕಾಲದಲ್ಲೂ ಪೌರಕಾರ್ಮಿಕರು ಇದ್ದರು. ಭಾರತಕ್ಕೆ ಬ್ರಿಟಿಷರು ಬಂದ ಮೇಲೆ ಪೌರಕಾರ್ಮಿರ ಕಾರ್ಯ ಪ್ರಾರಂಭಗೊಂಡಿತ್ತು ಎಂದು ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಯೋಜನಾ ನಿರ್ದೇಶಕ ಬಿ.ಎಸ್.ರಮೇಶ ಮಾತಾನಾಡಿದರು. ಇದೇ ಸಂದರ್ಭದಲ್ಲಿ ಖಾಯಂ ನೌಕರರಿಗೆ ಒಂದು ಸಾವಿರ ರೂ, ವಿಶೇಷ ಭತ್ಯೆ ಚೆಕ್, ವಿತರಿಸಲಾಯಿತು. ಉತ್ತಮ ಕಾರ್ಯನಿರ್ವಹಿಸಿದ ಹಾಗು ವಿವಿಧ ಕ್ರೀಡೆಯಲ್ಲಿ ಪ್ರಶಸ್ತಿ ಪಡೆದವರಿಗೆ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಸಭಾ ಪತಿ ಅಂಬಾಜಿ ಜೋಷಿ, ಎ.ಇ.ಇ ಎಮ್.ಜಿ.ಕಿತ್ತಲಿ, ಬಸವರಾಜ ಕೋಟಬಾಗಿ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಚ್.ಎಮ್. ಲಾಯದಗುಂದಿ ಕಾರ್ಯಕ್ರಮವನ್ನು ನಿರೂಪಿಸಿದರು.

Edited By : Nirmala Aralikatti
Kshetra Samachara

Kshetra Samachara

23/09/2022 06:30 pm

Cinque Terre

4.32 K

Cinque Terre

0