ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟ : ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ತರಬೇತಿ ಕಾರ್ಯಾಗಾರ

ಬಾಗಲಕೋಟ : ನಗರದ ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯ, ಹಾಗೂ ಬಸವೇಶ್ವರ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ (ಬಿ.ಹೆಚ್.ಆರ್.ಡಿ.), ಬಾಗಲಕೋಟೆ ಇವರ ಸಹಯೋಗದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ತರಬೇತಿ ಕಾರ್ಯಾಗಾರ ಇಂದು ಆರಂಭಗೊಂಡಿತು.

ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಾಗಾರ ಸೆ.23ರ ವರೆಗೆ ನಡೆಯಲಿದೆ. ಕಾರ್ಯಾಗಾರ ಚಾಲನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರ ಡಾ.ವ್ಹಿ.ಪಿ. ಹೊಸಕೇರಿ ಅವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ವ್ಹಿ.ಎ. ಬೆನಕನಾಳ ಶಿಕ್ಷಣ ತಜ್ಞರು, ಗುಳೇದಗುಡ್ಡ. ಹಾಗೂ ಶ್ರೀ. ಎಸ್. ಆರ್. ಮನಹಳ್ಳಿ ನಿರ್ದೇಶಕರು ಬಿ.ವ್ಹಿ.ವ್ಹಿ. ಸಂಘದ ಬಸವೇಶ್ವರ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಬಾಗಲಕೋಟೆ ಹಾಜರಿದ್ದರು. ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿಗಳು ಪ್ರಾರ್ಥನಾ ಗೀತೆಯೊಂದಿಗೆ ಆರಂಭಿಸಿದರು. ಕಾಲೇಜಿನ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Edited By : Abhishek Kamoji
Kshetra Samachara

Kshetra Samachara

06/10/2022 05:16 pm

Cinque Terre

3.94 K

Cinque Terre

0