ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಮಾಜಿ ಸಚಿವ ಎಚ್.ವೈ. ಮೇಟಿ ಅವರು ಮಹಾತ್ಮ ಗಾಂಧಿ 20ನೇ ಶತಮಾನದ ಜಗತ್ತಿಗೆ ಸಿಕ್ಕ ಮಹಾನ್ ದಾರ್ಶನಿಕ. ಅವರ ಕಾರ್ಯಕ್ಷೇತ್ರ ಭಾರತವಿರಬಹುದು, ಆದರೆ ಅವರು ಇಡೀ ಜಗತ್ತಿಗೆ ಶಾಂತಿ, ಅಹಿಂಸೆಯ ತತ್ವಗಳಿಂದ ಪ್ರಭಾವಿಸಿದವರು ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಕೂಡ ಮಹಾತ್ಮನ ಹೆಜ್ಜೆ ಗುರುತುಗಳಲ್ಲಿ ಸಾಗುವ ಪ್ರಯತ್ನವಾಗಿದೆ. ಈ ಮೂಲಕ ಗಾಂಧೀಜಿ ಅವರನ್ನು ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹದ್ಲಿ ಮಾತನಾಡಿ ದೇಶ ಕಂಡ ದಕ್ಷ ಹಾಗೂ ಸಜ್ಜನ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿ. ಭಾರತದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಇವರು ಪ್ರತಿಯೊಬ್ಬ ರಾಜಕಾರಣಿಗೂ ಪ್ರೇರಣೆ. ಇಂತಹ ಮಹಾನ್ ನಾಯಕರು ಪ್ರಾತಃಸ್ಮರಣಿಯ ಎಂದರು.
ಬ್ಲಾಕ್ ಅಧ್ಯಕ್ಷ ಎಸ್.ಎನ್. ರಾಂಪೂರ, ಅಬ್ದುಲ್ ರಜಾಕ್ ಬೆಣೂರು, ಎಸ್ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಪ್ರೇಮನಾಥ್ ಗರಸಂಗಿ, ರೇಣುಕಾ ನ್ಯಾಮಗೌಡ ರೇಣುಕಾ ನಾರಾಯಣಕರ, ಜೈಬೂನಿ ಇಲಕಲ್ಲ, ಸುಧಾ ಪಾಟೀಲ್, ಮುತ್ತು ಜೋಳದ ಇದ್ದರು.
Kshetra Samachara
02/10/2022 04:33 pm