ಬಾಗಲಕೋಟೆ: ಹಿರಿಯ ಜೀವಿಗಳನ್ನು ಪ್ರೀತಿ, ಗೌರದಿಂದ ಕಾಣುವ ಜತೆಗೆ ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕೆಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆಯಲ್ಲಿ ಒಬ್ಬರು ಹಿರಿಯರಿದ್ದರೆ ಅವರ ಅನುಭವದ ಮಾತುಗಳು ಕೇಳುವ ಜತೆಗೆ ಅವುಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದರು.
ಜಿಲ್ಲೆಯ ವೆಂಕಪ್ಪ ಸುಗತೇಕರ ಅವರಿಗೆ ಹಿರಿಯ ನಾಗರಿಕರ ವಿಭಾಗದ ಜಾನಪದ ಕಲಾ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಹಿರಿಯ ನಾಗರಿಕರಿಗೆ ಸರಕಾರ ಸಂದ್ಯಾ ಸುರಕ್ಷಾ, ವೃದ್ದಾಪ್ಯ ವೇತನ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಹಿರಿಯ ನಾಗರಿಕರು ಪಡೆದುಕೊಳ್ಳಬೇಕು ಎಂದರು.
ವಿಕಲಚೇತನರ ಸಮುದಾಯ ಭವನ ನಿರ್ಮಾಣ ಮಾಡಲಿಕ್ಕೆ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ಅರ್ಧ ಎಕರೆ ಜಮೀನು ನೀಡಲಾಗುತ್ತಿದ್ದು, ಸುಸಜ್ಜಿತ ಕಟ್ಟಡವನ್ನು ಮಾಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ಹಿರಿಯ ನಾಗರಿಕರು ಸಮಾಜದಲ್ಲಿ ಗೌರವಕ್ಕೆ ಪ್ರತೀಕರಾದವರು. ಗೌರವಕ್ಕೆ ಶ್ರೇಷ್ಠರಾದವರು ತಂದೆ-ತಾಯಿಯರು ಎಂದರು.
PublicNext
01/10/2022 10:04 pm