ಬಾಗಲಕೋಟೆ: ಬಾಹ್ಯಾಕಾಶ ತಂತ್ರಜ್ಞಾನ ಬೆಳವಣಿಗೆಯಾದರೆ ಎಲ್ಲ ತಂತ್ರಜ್ಞಾನಗಳು ಸಹಜವಾಗಿ ಬೆಳವಣಿಗೆಯಾಗುತ್ತವೆ ಎಂದು ಇಸ್ರೋ ಸಂಸ್ಥೆಯ ವಿಶ್ರಾಂತ ಹಿರಿಯ ವಿಜ್ಞಾನಿ ಸಿ.ಎ. ಪ್ರಭಾಕರ ಹೇಳಿದ್ದಾರೆ.
ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನಲ್ಲಿಂದು ಆಯೋಜಿಸಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ "ಬಾಹ್ಯಾಕಾಶ ಮತ್ತು ಸುಸ್ಥಿರತೆ" ಎಂಬ ಧ್ಯೇಯವಾಕ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಇಸ್ರೋ ನಿರ್ಮಿತ ನೇವಿಗೇಷನ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಳವಡಿಕೆಗಳಿಂದ ನೈಸರ್ಗಿಕ ಪ್ರಕೋಪಗಳನ್ನು ಅಂದಾಜಿಸಿ ಉತ್ತಮ ನಿರ್ವಹಣೆ ಮಾಡಲಾಗುತ್ತದೆ ಎಂದರು.
ತಂತಿ ಆಧಾರಿತ ಇಂಟರ್‌ನೆಟ್ ತಲುಪದ ಸ್ಥಳಗಳಲ್ಲಿ, ರಕ್ಷಣಾವಲಯದ ಸೀಮೆಗಳಲ್ಲಿ, ನಾವಿಕ್ (ಬಾರತೀಯ ನಿರ್ಮಾಣದ ನ್ಯಾವಿಗೇಷನ್ ವ್ಯವಸ್ಥೆ) ತಂತ್ರಜ್ಞಾನ ಬಳಸಿ ಪರಿಣಾಮಕಾರಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
Kshetra Samachara
08/10/2022 08:21 pm