ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಧರ್ಮ ಜಾಗೃತಿ ಜತೆ ರಾಷ್ಟ್ರ ಜಾಗೃತಿ ಮೂಡಿಸಿದ ಶಿವ ಭವಾನಿ ದೇವಸ್ಥಾನ

ಬಾಗಲಕೋಟೆ: ನೂರಾರು ಸ್ವಾತಂತ್ರ್ಯ ಹೋರಾಟಗಾರ ಭಾವಚಿತ್ರಗಳಿಂದಾಗಿ ನಗರದ ಕಿಲ್ಲಾ ಚೌಕ್ ನಲ್ಲಿರುವ ಶಿವ ಭವಾನಿ ದೇವಸ್ಥಾನ ನವರಾತ್ರಿಯ ಈ ಒಂಭತ್ತು ದಿನಗಳ ಕಾಲ ಸಹಸ್ರಾರು ಭಕ್ತರ ಗಮನ ಸೆಳೆಯಿತು.

ನವರಾತ್ರಿ ‌ಸಂಭ್ರಮದ ಮೊದಲ ದಿನ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗುವ ವೇಳೆಗೆ ದೇವಸ್ಥಾನದ ಗೋಡೆಗಳ ಮೇಲೆ ನೂರಾರು ಸ್ವಾತಂತ್ರ್ಯ ಹೋರಾಟ ಗಾರ ಭಾವಚಿತ್ರಗಳು ಸಾಕಷ್ಟು ಗಮನ ಸೆಳೆದವು. ದಿ. ಮರಾಠಾ ಹಿತ ಚಿಂತಕ ಸಮಿತಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಸ್ವಾತಂತ್ರ್ಯ ಹೋರಾಟಗಾರ ಸ್ಮರಣೆಗಾಗಿ ಭಾವಚಿತ್ರ ಅಳವಡಿಸಿದೆ.

ನವರಾತ್ರಿಯ ಈ ಸಮಯದಲ್ಲಿ ದೇವಸ್ಥಾನಕ್ಕೆ ಬಂದವರೆಲ್ಲ ದೇವಿಯ ದರ್ಶನ ಪಡೆಯುವ ಜತೆಗೆ ಗೊಡೆಗಳ ಮೇಲೆ ರಾರಾಜಿಸುತ್ತಿರುವ ಸ್ವಾತಂತ್ರ್ಯ ಯೋಧರ ಭಾವಚಿತ್ರಗಳನ್ನು ನೋಡಿ ಪುಳಕಗೊಳ್ಳುವ‌ ಜತೆಗೆ ಸ್ವಾತಂತ್ರ್ಯ ಹೋರಾಟಗಾರ ಹೋರಾಟ, ಅವರ ತ್ಯಾಗ ಬಲಿದಾನಗಳನ್ನೂ ಒಂದೊಮ್ಮೆ ಮೆಲಕು ಹಾಕಿಯೇ ದೇವಸ್ಥಾನದಿಂದ ಹೊರಡುತ್ತಿದ್ದರು. ದೇವಿಯ ದರ್ಶನಕ್ಕಾಗಿ ಬಂದ ಎಷ್ಟೋ ಜನ ಪಾಲಕರು ಮನೆಯಿಂದ ತಮ್ಮ ಮಕ್ಕಳನ್ನು ಕರೆತಂದು ಸ್ವಾತಂತ್ರ್ಯ ಯೋಧರನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ದೇವಸ್ಥಾನ ಕಮೀಟಿಯವರ ಕೆಲಸವನ್ನು ಶ್ಲಾಘಿಸಿದ್ದಾರೆ.

ವಿಜಯ ದಶಮಿಯ ಕೊನೆ ದಿನವಾದ ಇಂದೂ ಕೂಡಾ ದೇವಸ್ಥಾನಕ್ಕೆ ಬರುವ ಭಕ್ತರು ಖುಷಿಯಿಂದ ಸ್ವಾತಂತ್ರ್ಯ ಹೋರಾಟಗಾರ ಭಾವಚಿತ್ರಗಳನ್ನು ಕಂಡು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಕಾರಣವಿಷ್ಟೇ ಇತಿಹಾಸದ ಪುಟದಲ್ಲಿ ಕಾಣಸಿಗದ ಅನೇಕ ಹೋರಾಟಗಾರರ ಚಿತ್ರಗಳು ಅಲ್ಲಿವೆ. ಒಟ್ಟಾರೆ ಜನರಿಗೆ ರಾಷ್ಟ್ರ ಭಕ್ತರನ್ನು ಪರಿಚಯಿಸಬೇಕು ಎನ್ನುವ ದೇವಸ್ಥಾನ ಕಮೀಟಿಯವರ ಉದ್ದೇಶ ಸಫಲಗೊಂಡಿದೆ. ಹಾಗಾಗಿಯೇ ಈ ಬಾರಿಯ ನವರಾತ್ರಿ ಹಬ್ಬದ ವೇಳೆ ಶಿವ ಭವಾನಿ ದೇವಸ್ಥಾನ ಜನರಲ್ಲಿ ಧಾರ್ಮಿಕ ಭಾವನೆ ಜಾಗೃತಿಗೊಳಿಸುವ ಜತೆಗೆ ಸ್ವಾತಂತ್ರ್ಯ ಯೋಧರ ಪರಿಚಯಿಸುವ ಮೂಲಕ ಸ್ವಾತಂತ್ರೋತ್ಸವದ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ರಾಷ್ಟ್ರೀಯ ಭಾವನೆ ಪ್ರಖರಗೊಳಿಸುವಲ್ಲೂ ಯಶಸ್ಸು ಕಂಡಿತು.

Edited By : Nagaraj Tulugeri
Kshetra Samachara

Kshetra Samachara

05/10/2022 05:21 pm

Cinque Terre

2.86 K

Cinque Terre

0

ಸಂಬಂಧಿತ ಸುದ್ದಿ