ರಬಕವಿ-ಬನಹಟ್ಟಿ : ಆರೋಗ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಬನಹಟ್ಟಿಯಲ್ಲಿರುವ ಅಕ್ರಮ ಮಾವಾ ತಯಾರಿಕಾ ಘಟಕದ ಮೇಲೆ ದಿಢೀರ್ ದಾಳಿ ನಡೆಸಿ, ಮಾವಾ ತಯಾರಿಸಲು ಬಳಸಲಾಗುವ ನಾಲ್ಕು ಯಂತ್ರಗಳು ಹಾಗೂ ಪಾನ್ ಬಿಡಾ ಕಚ್ಚಾ ವಸ್ತುಗಳು ಸೇರಿದಂತೆ 144600 ಮತ್ತು 79500 ಸೇರಿ 224100 ಕಿಮ್ಮತ್ತಿನ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಅಧಿಕೃತ ಮಾಹಿತಿ ಮೇರೆಗೆ ತಂಡವು ದಾಳಿ ನಡೆಸಿದ್ದು, ಜಿಲ್ಲಾ ಆರೋಗ್ಯ ಸಮೀಕ್ಷಣ ಅಧಿಕಾರಿ ದಯಾನಂದ ಸೋಮಲಿಂಗ ಕರೆಯಣ್ಣವರ ಮತ್ತು ಜಮಖಂಡಿ ತಾಲೂಕಾಧಿಕಾರಿ ಗೈಬುಸಾಬ ಗಲಗಲಿ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣದಲ್ಲಿ ಬನಹಟ್ಟಿ ಮೂಲದ ಅಸ್ಲಂ ನೂರದ್ದಿನ ಚಿಂಚಲಿ, ಮುಸ್ತಾಕ್ ಚಿಂಚಲಿ, ಮಂಜುನಾಥ ಮಾಂತೇಶ ಬಡಿಗೇರ, ಇಸಾಕ್ ಮಾಲದಾರ್ ಆರೋಪಿಗಳಾಗಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
26/10/2024 04:12 pm