ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಬಕವಿ-ಬನಹಟ್ಟಿ: ಕಾಂಗ್ರೇಸ್ ಪಕ್ಷದಿಂದ ಬೃಹತ್ ಪ್ರತಿಭಟನೆ

ರಬಕವಿ-ಬನಹಟ್ಟಿ: ಕೇಂದ್ರ ಸಚಿವ ಅಮಿತ್‍ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಕುರಿತಂತೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ರಬಕವಿ-ಬನಹಟ್ಟಿ ಕಾಂಗ್ರೇಸ್ ಸಮಿತಿಯಿಂದ ಬನಹಟ್ಟಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು. ಎಂಎಲ್‍ಸಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅಗೌರವಪೂರಕವಾಗಿ ಮಾತನಾಡಿದ್ದಾರೆ ಎಂದು ಒತ್ತಾಯಿಸಿ ಅವರನ್ನು ವಿಪ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಇದೆ ಸಂದರ್ಭದಲ್ಲಿ ಒತ್ತಾಯಿಸಿ ಪ್ರತಿಭಟಿಸಿದರು. ಹೋರಾಟದಲ್ಲಿ ಮುಖಂಡ ಸಿದ್ದು ಕೊಣ್ಣೂರ, ಲಕ್ಷ್ಮಣ ದೆಸಾರಟ್ಟಿ, ಭೀಮಶಿ ಮಗದುಮ್ ಸೇರಿದಂತೆ ತೇರದಾಳ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಹಿರಿಯ, ಯುವ ಮುಖಂಡರು ಭಾಗಿಯಾಗಿದ್ದರು. ಪ್ರತಿಭಟನಾ ಸ್ಥಳದಲ್ಲಿ ತಹಶೀಲ್ದಾರ ಗಿರೀಶ ಸ್ವಾದಿ ಅವರು ಮನವಿ ಸ್ವಿಕರಿಸಿ ಮಾತನಾಡಿ ಸದರಿ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಕಳುಹಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.

Edited By : PublicNext Desk
Kshetra Samachara

Kshetra Samachara

24/12/2024 05:01 pm

Cinque Terre

4.32 K

Cinque Terre

0