ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 6.10.2022

ಮೇಷ: ವೃತ್ತಿಜೀವನದಲ್ಲಿ ಬದಲಾವಣೆ ಕಂಡುಬರುವುದು. ಆರ್ಥಿಕ ಸಮಸ್ಯೆ ಕಾಡಬಹುದು. ಅತಿಯಾದ ಸುತ್ತಾಟದಿಂದ ದೈಹಿಕ ಶ್ರಮ.

ವೃಷಭ: ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ಸ್ವಂತ ವ್ಯಾಪಾರದಲ್ಲಿ ಅಶುಭ. ಮನೆ ನಿರ್ವಣದ ಕಾರ್ಯದಲ್ಲಿ ಹಿನ್ನಡೆ.

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಅಡೆತಡೆ ಎದುರಾಗಲಿದೆ. ರೈತಾಪಿ ವರ್ಗದವರಿಗೆ ಶುಭ. ಕಾರ್ಯನಿಮಿತ್ತ ಪ್ರಯಾಣ ಮಾಡಬೇಕಾಗುವುದು.

ಕಟಕ: ವ್ಯಾಪಾರದಲ್ಲಿ ಹಿನ್ನಡೆ ಅನುಭವಿಸುವಿರಿ. ಮಾತಿನಲ್ಲಿ ಹಿಡಿತವಿಟ್ಟುಕೊಳ್ಳುವುದು ಜಾಣತನ. ಸ್ವಯಂಕೃತ ಅಪರಾಧದಿಂದ ನಷ್ಟ.

ಸಿಂಹ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಬಂಧುಗಳಿಂದ ಬೇಸರವಾಗುವುದು. ಪ್ರಯಾಣದಲ್ಲಿ ಹಿನ್ನಡೆ ಅನುಭವಿಸಬೇಕಾದೀತು.

ಕನ್ಯಾ: ಐಷಾರಾಮಿ ವಸ್ತುಗಳ ಖರೀದಿ. ಮಿತ್ರರೊಂದಿಗೆ ಮಾತಿನಿಂದ ಜಗಳ ಉಂಟಾಗಲಿದೆ. ವಿವಾಹ ಆಕಾಂಕ್ಷಿಗಳಿಗೆ ಶುಭಸಮಾಚಾರ.

ತುಲಾ: ಕೈಗಾರಿಕೆಯವರಿಗೆ ಉತ್ತಮ ದಿನ. ಕೆಲಸಕ್ಕೆ ಹಿರಿಯರಿಂದ ಮೆಚ್ಚುಗೆ, ಬಡ್ತಿ ದೊರೆಯುವುದು. ಆರ್ಥಿಕ ಪರಿಸ್ಥಿತಿ ಸುಧಾರಣೆ.

ವೃಶ್ಚಿಕ: ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಸಹಾಯ. ಹಣದ ಒಳಹರಿವು ಹೆಚ್ಚಲಿದೆ. ಪಿತೃ ವರ್ಗದಿಂದ ಧನ ಸಹಾಯ ಒದಗುವುದು.

ಧನುಸ್ಸು: ಬರಹಗಾರರಿಗೆ ಒಳ್ಳೆಯ ದಿನ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಕುಲದೇವರನ್ನು ಭಜಿಸಿ. ದುಶ್ಚಟದಿಂದ ಸಮಸ್ಯೆ ತಲೆದೋರುವುದು.

ಮಕರ: ಉದ್ಯೋಗ ಸ್ಥಳದಲ್ಲಿ ತೊಂದರೆ ಎದುರಿಸಬೇಕಾದೀತು. ಶ್ರಮಕ್ಕೆ ತಕ್ಕ ಲಾಭವಿದೆ. ಆಲಸ್ಯದಿಂದ ಕೆಲಸಗಳಲ್ಲಿ ಅಡ್ಡಿ.

ಕುಂಭ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ವಾಹನ ಚಾಲಕರಿಗೆ ಉತ್ತಮ ಆದಾಯ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ.

ಮೀನ: ತಲೆನೋವಿನ ಸಮಸ್ಯೆ. ಹೆಚ್ಚು ನೀರು ಕುಡಿಯಿರಿ. ಹಣಕಾಸಿನ ಪ್ರಗತಿ ಅಷ್ಟಕಷ್ಟೆ. ಕೋರ್ಟು ಕೇಸಿನಲ್ಲಿ ತೊಂದರೆಯ ಸಾಧ್ಯತೆ ಜಾಸ್ತಿ.

Edited By : Nirmala Aralikatti
PublicNext

PublicNext

06/10/2022 07:13 am

Cinque Terre

63.32 K

Cinque Terre

0