ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 20.7.2022

ಮೇಷ: ನಿರುದ್ಯೋಗಿಗಳಿಗೆ ಶುಭ ಸುದ್ದಿ ಬರಲಿದೆ. ಪಾಲುದಾರಿಕೆಯಲ್ಲಿ ನಷ್ಟ ಉಂಟಾಗಬಹುದು. ಮಾನಸಿಕ ಒತ್ತಡ ಅನುಭವಿಸುವಿರಿ.

ವೃಷಭ: ಆತ್ಮೀಯ ಸ್ನೇಹಿತನ ಭೇಟಿ. ಹಿರಿಯರ ಆಶೀರ್ವಾದ ಸಿಗಲಿದೆ. ವಾಹನ ಚಾಲಕರಿಗೆ ಕಿರಿಕಿರಿ ಆಗಬಹುದು. ಧನ ನಷ್ಟ.

ಮಿಥುನ: ಅಧಿಕ ತಿರುಗಾಟದಿಂದ ಆಯಾಸ. ವಸ್ತು ಖರೀದಿಯಲ್ಲಿ ಮೋಸ. ಸರ್ಕಾರಿ ಕ್ಷೇತ್ರದಲ್ಲಿ ಅಪಜಯ. ಮಾತೃಮೂಲವಾದ ಆಸ್ತಿಗಳಿಕೆ.

ಕಟಕ: ಮಹಿಳಾ ಉದ್ಯೋಗಿಗಳಿಗೆ ತೊಂದರೆ. ಗೊಂದಲದಿಂದ ಕೌಟುಂಬಿಕ ಒತ್ತಡ. ಕಚೇರಿಯಲ್ಲಿ ಕಲಹ ಉಂಟಾಗಬಹುದು.

ಸಿಂಹ: ವಾದ ವಿವಾದಗಳಲ್ಲಿ ಸೋಲು. ದೂರ ಪ್ರಯಾಣ ಮಾಡಬೇಕಾಗಬಹುದು. ಆಟೋಮೊಬೈಲ್ ವ್ಯಾಪಾರಿಗಳಿಗೆ ಧನ ನಷ್ಟ ಸಾಧ್ಯತೆ.

ಕನ್ಯಾ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಸಾಲ ತೀರಿಸುವಿರಿ. ಮಹಿಳೆಯರಿಂದ ಬೆಂಬಲ. ಕೆಲಸ ಕಳೆದುಕೊಳ್ಳುವ ಭೀತಿ.

ತುಲಾ: ಸಾರ್ವಜನಿಕ ಜೀವನದಲ್ಲಿ ಸೌಜನ್ಯದಿಂದ ಇದ್ದರೆ ಕ್ಷೇಮ. ಅಕಾಲ ಭೋಜನ. ಅವಿವಾಹಿತರಿಗೆ ವಿವಾಹ ಯೋಗವಿದೆ.

ವೃಶ್ಚಿಕ: ಮಹಿಳಾ ಉದ್ಯೋಗಿಗಳು ತಾಳ್ಮೆಯಿಂದ ಇರಿ. ಸಾಲಗಾರರಿಂದ ತೊಂದರೆ. ಸಂಗಾತಿಯಿಂದ ಆಪ್ತ ಸಲಹೆ, ಸಂತಸದ ಸುದ್ದಿ.

ಧನುಸ್ಸು: ಆಲಸ್ಯ ಮನೋಭಾವ. ಪರಿಶ್ರಮಕ್ಕೆ ತಕ್ಕ ಫಲ. ದೇವತಾ ಕಾರ್ಯಗಳಿಂದ ಸಮಾಧಾನ. ನೌಕರಿಯಲ್ಲಿ ಬಡ್ತಿ ಸಾಧ್ಯತೆ.

ಮಕರ: ಸಾಲದಿಂದ ಮುಕ್ತಿ. ದಂಡ ಕಟ್ಟುವ ಸಾಧ್ಯತೆ. ಗೆಳೆಯರ ಕಷ್ಟದಲ್ಲಿ ಭಾಗಿಯಾಗುವಿರಿ. ಕೆಟ್ಟ ಜನರಿಂದ ಕಿರಿಕಿರಿ ಅನುಭವಿಸುವಿರಿ.

ಕುಂಭ: ಹಣ ಬಂದರೂ ಉಳಿಯುವದಿಲ್ಲ. ಅಕಾಲ ಭೋಜನ. ಶತ್ರು ನಿಗ್ರಹ. ವಿದ್ಯಾಭ್ಯಾಸದಲ್ಲಿ ಏಳಿಗೆ. ಮಾನಸಿಕ ನೆಮ್ಮದಿ.

ಮೀನ: ಅಸಾಧಾರಣ ವ್ಯಕ್ತಿಯ ಭೇಟಿ. ಆಲಸ್ಯದಿಂದ ಧನ ನಷ್ಟ. ಪತಿ-ಪತ್ನಿಯರಲ್ಲಿ ವಿರಸ. ಸ್ವಯಂಕೃತ ಅಪರಾಧದಿಂದ ಅವಮಾನ.

Edited By : Nirmala Aralikatti
PublicNext

PublicNext

20/07/2022 07:05 am

Cinque Terre

73.3 K

Cinque Terre

0