ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ :4.6.2022

ಮೇಷ: ನಿರೀಕ್ಷಿತ ಧನಲಾಭ. ಮಕ್ಕಳ ಪ್ರಗತಿಯಿಂದ ಸಂತೋಷ. ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಕಾರ್ಯಗಳು ನೆರವೇರುತ್ತವೆ.

ವೃಷಭ: ಕುಟುಂಬ ಸದಸ್ಯರ ಸಹಾಯ ದೊರೆಯಲಿದೆ. ಸುಖ ಭೋಜನ. ಮನಃಶಾಂತಿ. ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ.

ಮಿಥುನ: ಪರಿಶ್ರಮಕ್ಕೆ ತಕ್ಕ ಫಲ ದೊರೆತು ಸಂತಸ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಂಭವ. ಹಣಕಾಸು ನೆರವು ಹರಿದು ಬರಲಿದೆೆ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ. ಮಾತನಾಡುವಾಗ ಎಚ್ಚರ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆದೀತು. ಆರೋಗ್ಯದ ಕಡೆ ಗಮನ ಹರಿಸಿ.

ಸಿಂಹ: ಕುಟುಂಬ ಸೌಖ್ಯ. ದ್ರವ್ಯಲಾಭ. ಶತ್ರು ನಾಶ. ಪ್ರಯಾಣದಿಂದ ತೊಂದರೆ. ಮನೋವ್ಯಥೆ. ರೋಗಬಾಧೆ ಕಾಡಲಿದೆ.

ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದಾನ ಮಾಡುವಿರಿ. ರಾಜಕಾರಣಿಗಳಿಗೆ ನಿರಾಸೆಯಾಗುವ ಸಾಧ್ಯತೆ ಜಾಸ್ತಿ.

ತುಲಾ: ಬಂಧುಗಳ ಭೇಟಿ. ಸುಖ ಭೋಜನ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ವಾಹನ ಚಾಲಕರಿಗೆ ತೊಂದರೆಯಾಗಬಹುದು.

ವೃಶ್ಚಿಕ: ಅಧಿಕ ನಷ್ಟ. ಸಾಲ ಮಾಡುವ ಸಾಧ್ಯತೆ. ಸ್ವಂತ ಪರಿಶ್ರಮದಿಂದ ಅನುಕೂಲವಾಗುವುದು. ಆಲಸ್ಯ, ಕೋಪ ನಿಯಂತ್ರಿಸಿಕೊಳ್ಳಿ.

ಧನುಸ್ಸು: ವಿದ್ಯಾಭ್ಯಾಸಕ್ಕಾಗಿ ಪ್ರಯಾಣ. ರಿಯಲ್ ಎಸ್ಟೇಟ್ನವರಿಗೆ ಲಾಭ. ಉದ್ಯೋಗದಲ್ಲಿ ತಿರುಗಾಟ. ಹೊಸ ಪ್ರಯತ್ನದಲ್ಲಿ ಜಯ.

ಮಕರ: ಪಿತ್ರಾರ್ಜಿತ ಆಸ್ತಿಯ ವಾದ. ಮನಕ್ಲೇಷ. ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ. ಅನ್ಯರಲ್ಲಿ ವೈಮನಸ್ಯ. ಸ್ವಯಂಕೃತ ಅಪರಾಧ.

ಕುಂಭ: ತೀರ್ಥಯಾತ್ರಾ ದರ್ಶನ. ಉತ್ತಮ ಸಂಪಾದನೆ. ಮಾತಿನಲ್ಲಿ ಹಿಡಿತವಿರಲಿ. ಮಕ್ಕಳ ವಿಷಯದಲ್ಲಿ ನೋವು ಉಂಟಾದೀತು.

ಮೀನ: ಸ್ತ್ರೀಯರಿಗೆ ಅನುಕೂಲ. ನಾನಾ ವಿಚಾರಗಳಲ್ಲಿ ಆಸಕ್ತಿ. ವಿವಿಧ ಮೂಲಗಳಿಂದ ಧನಲಾಭ. ರಾಜಕೀಯದಲ್ಲಿ ಮನ್ನಣೆ.

Edited By : Nirmala Aralikatti
PublicNext

PublicNext

04/06/2022 07:10 am

Cinque Terre

21.02 K

Cinque Terre

0