ಮೇಷ ರಾಶಿ
ಪ್ರೇಮಿಗಳ ಮಧ್ಯೆ ಕೆಲವು ವಿಚಾರಗಳಿಂದ ಅಪಾರ್ಥ ಮೂಡಬಹುದು ಇದರಿಂದ ಮನಸ್ತಾಪ ಉಂಟಾಗಲಿದೆ. ಯಾವುದೇ ವಿಷಯಗಳನ್ನು ಪರಿಗಣಿಸುವ ಮೊದಲು ಸಂಪೂರ್ಣ ವಿಷಯದ ಧ್ಯಾನ ಪಡೆಯಿರಿ. ಚಿನ್ನಾಭರಣದ ಹೂಡಿಕೆಗಳಿಂದ ಲಾಭ ಹೆಚ್ಚಾಗಲಿದೆ. ಮನೆಗೆ ಸಂಬಂಧಿತ ವಸ್ತುಗಳನ್ನು ಇಂದು ಖರೀದಿ ಮಾಡುವಿರಿ. ಬಂಧು-ಮಿತ್ರರಿಂದ ಈ ದಿನ ಮೋಜಿನ ಸಂಜೆ ಕಂಡುಬರುತ್ತದೆ. ಪ್ರೇಮಿಗಳಲ್ಲಿ ಉತ್ತಮವಾದ ಸಂಭಾಷಣೆ ಹಾಗೂ ಚುಟುಕು ಪ್ರವಾಸದ ಯೋಗಗಳು ಕೂಡಿಬರಲಿದೆ.
ವೃಷಭ ರಾಶಿ
ನಿಮ್ಮ ಮನಸ್ಥಿತಿಯು ಸಮತೋಲನ ಕಾಪಾಡಿಕೊಳ್ಳಲು ಚುಟುಕು ಪ್ರವಾಸ ಅಥವಾ ಸಾಮಾಜಿಕ ಕಾರ್ಯಕ್ರಮಗಳಿಗೆ ಭೇಟಿನೀಡುವುದು ಒಳ್ಳೆಯದು. ಕುಟುಂಬ ಸದಸ್ಯರುಗಳ ಜವಾಬ್ದಾರಿಗಳನ್ನು ನೀವು ನಿರ್ವಹಿಸಿ ಮತ್ತು ಅವರ ಬೇಡಿಕೆ ಪೂರೈಕೆ ಮಾಡುವುದು ಉತ್ತಮವಾದ ಕೆಲಸ. ಪ್ರಯಾಣದ ಸಂದರ್ಭದಲ್ಲಿ ದಾಖಲೆಪತ್ರಗಳು ಎಚ್ಚರದಿಂದ ಕಾಪಾಡಿಕೊಳ್ಳಿ. ನಿಮ್ಮ ಕೆಲವು ಕಾರ್ಯಗಳು ಜನಪ್ರಿಯತೆ ಯಶಸ್ಸು ತಂದು ಕೊಡಲಿದೆ. ನಿಮ್ಮ ಕೆಲವು ದೌರ್ಬಲ್ಯಗಳಿಗೆ ಸಂಗಾತಿಯಿಂದ ಅಗತ್ಯವಾದ ಸಹಕಾರ ದೊರೆಯುವ ದಿನವಿದು.
ಮಿಥುನ ರಾಶಿ
ಒತ್ತಡ ಹಾಗೂ ಖಿನ್ನತೆಯ ವಿಚಾರಗಳಿಂದ ದೂರವಿರಿ. ನಿಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಇತರರ ಮೇಲೆ ಖರ್ಚು ಮಾಡುವ ನಿಮ್ಮ ವ್ಯವಸ್ಥೆ ಸರಿಯಲ್ಲ. ಕುಟುಂಬದ ಶುಭಕಾರ್ಯಗಳಿಗೆ ನಿಮ್ಮ ಪಾಲ್ಗೊಳ್ಳುವಿಕೆಯಿಂದ ಉತ್ತಮವಾಗಿ ನಡೆಯಲಿದೆ. ದ್ವೇಷ ವಿರುವ ಭಾವನೆಗಳನ್ನು ಹೋಗಿಸಲು ನಿಮ್ಮಿಂದ ಪ್ರೀತಿ ವ್ಯಕ್ತ ವಾಗಲಿದೆ. ನಿಮ್ಮಲ್ಲಿನ ಸಕಾರಾತ್ಮಕ ಗುಣಗಳಿಂದ ಬಯಸಿದ್ದೆಲ್ಲ ಪಡೆಯುವ ಸಾರ್ಥಕ ಲಕ್ಷಣಗಳು ಕಾಣಬಹುದು. ಪರೋಪಕಾರಿ ಸೇವಾ ಗುಣಗಳಿಂದ ಹೆಚ್ಚು ಪರಿಣಾಮ ಬೀರುವಿರಿ.
ಕರ್ಕಾಟಕ ರಾಶಿ
ಹಿರಿಯರ ಕಸಬುಗಳು ನಿಮಗೆ ಲಾಭ ತಂದು ನೀಡಲಿದೆ. ಕೆಲಸದಲ್ಲಿ ಅಗತ್ಯ ಆಧುನೀಕರಣಕ್ಕೆ ಒತ್ತು ನೀಡುವುದು ಒಳಿತು. ನಿಮ್ಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸತತ ಪರಿಶ್ರಮ ಅಗತ್ಯವಿದೆ. ಕೌಟುಂಬಿಕ ಕಲಹಗಳಿಂದ ಮಾನಸಿಕ ಚಿತ್ರಹಿಂಸೆ ಅನುಭವಿಸುವ ಸಾಧ್ಯತೆ ಕಂಡುಬರುತ್ತದೆ. ವಿವೇಚನಾರಹಿತ ಹೂಡಿಕೆಗಳಿಂದ ಆದಷ್ಟು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಸಂಗಾತಿಯೊಂದಿಗೆ ಮುನಿಸಿಕೊಳ್ಳುವ ಸ್ವಭಾವವನ್ನು ತೆಗೆದು ಹಾಕುವುದು ಉತ್ತಮ.
ಸಿಂಹ ರಾಶಿ
ಅನವಶ್ಯಕವಾಗಿ ವಿವಾದಾಸ್ಪದ ವಿಚಾರಗಳಲ್ಲಿ ತಲೆ ಹಾಕಬೇಡಿ. ವ್ಯವಹಾರದಲ್ಲಿ ಬಾಲಿಶವಾಗಿ ವರ್ತಿಸುವುದು ಸರಿ ಕಂಡುಬರುವುದಿಲ್ಲ. ಆದಾಯವು ಉತ್ತಮ ರೂಪದಲ್ಲಿ ಕಂಡುಬರುತ್ತದೆ. ಪರರನ್ನು ಮೆಚ್ಚಿಸಲು ಹೆಚ್ಚು ಖರ್ಚು ಮಾಡುವ ನಿಮ್ಮ ಸ್ವಭಾವವನ್ನು ನಿಯಂತ್ರಣದಲ್ಲಿಡಿ. ಕೊಟ್ಟಿರುವ ಸಾಲಗಳನ್ನು ವಸೂಲಿ ಮಾಡುವ ವ್ಯವಸ್ಥೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಹಣ ಮುಳುಗಡೆಯಾಗುವ ಸಾಧ್ಯತೆ ಕಾಣಬರುತ್ತದೆ. ಸಹೋದರ ವರ್ಗದವರಿಂದ ವ್ಯಾಜ್ಯಗಳು ಸೃಷ್ಟಿಯಾಗಬಹುದು ಎಚ್ಚರವಿರಲಿ.
ಕನ್ಯಾ ರಾಶಿ
ಭೂ ಸಂಬಂಧಿತ ವ್ಯವಹಾರಗಳು ಕೈಗೂಡಲಿದೆ. ಕ್ರಯವಿಕ್ರಯಗಳಲ್ಲಿ ಲಾಭದಾಯಕ ದಿನವಿದು. ಜಮೀನು ಮಾರಾಟ ಪ್ರಕ್ರಿಯೆ ಆರಾಮದಾಯಕವಾಗಿ ನಡೆಯಲಿದೆ. ಕೆಲವು ಆರ್ಥಿಕ ವ್ಯವಹಾರಗಳು ಅನುಮಾನಸ್ಪದವಾಗಿ ಕೂಡಿರುತ್ತದೆ ಎಚ್ಚರವಿರಲಿ. ಸ್ನೇಹಿತ ವರ್ಗದಲ್ಲಿ ಮನಸ್ತಾಪ ಮೂಡಬಹುದಾದ ಸಾಧ್ಯತೆ ಇದೆ. ಆರೋಗ್ಯವನ್ನು ಆದಷ್ಟು ಜತನದಿಂದ ಕಾಪಾಡಿಕೊಳ್ಳಿ. ಕುಟುಂಬದೊಂದಿಗೆ ಚುಟುಕು ಪ್ರವಾಸದ ಸಿಹಿಯಾದ ಅನುಭವ ನಿಮ್ಮ ಪಾಲಿನದ್ದಾಗಿದೆ.
ತುಲಾ ರಾಶಿ
ದುಂದು ವೆಚ್ಚಗಳಿಂದ ಜೀವನ ದುಸ್ತರವಾಗಬಹುದು. ನಿರೀಕ್ಷಿತ ಕಾರ್ಯಗಳು ಇಂದು ಕೈಗೂಡಲಿದೆ. ಹಣಕಾಸಿನ ವಸೂಲಿ ಯಶಸ್ವಿಯಾಗಿ ನಿಭಾಯಿಸುವಿರಿ. ನೆಂಟರಿಷ್ಟರ ಆಗಮನದಿಂದ ವೆಚ್ಚ ಹೆಚ್ಚಾಗಲಿದೆ. ಮಕ್ಕಳ ಕೆಲವೊಂದು ವರ್ತನೆಗಳು ನಿಮ್ಮ ಮನಸ್ಸಿಗೆ ಬೇಸರ ತರಿಸಬಹುದು. ಈ ದಿನ ಕುಟುಂಬ ಸಮೇತ ಮನರಂಜನೆಗೆ ಕಾರ್ಯಕ್ರಮಗಳಿಗೆ ಭೇಟಿ ನೀಡಲಿದ್ದೀರಿ. ಹಿರಿಯರು ನೀಡುವ ಜವಾಬ್ದಾರಿಯನ್ನು ಆದಷ್ಟೂ ಮನಸ್ಸಿಗೆ ತೆಗೆದುಕೊಂಡು ಕಾರ್ಯಗತರಾಗಿ. ರಂಗಭೂಮಿ, ಕಲೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ ಮತ್ತು ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಕಂಡುಬರುತ್ತದೆ.
ವೃಶ್ಚಿಕ ರಾಶಿ
ವಾದ-ವಿವಾದಗಳಲ್ಲಿ ಈ ದಿನ ಪಾಲ್ಗೊಳ್ಳುವುದು ಬೇಡ, ಇದು ನಿಮ್ಮ ವ್ಯವಸ್ಥೆಯನ್ನು ಅಪಹಾಸ್ಯ ಮಾಡಬಹುದು. ಆತುರದ ನಿರ್ಣಯಗಳಿಂದ ನಷ್ಟದ ಹೂಡಿಕೆಗಳು ಪ್ರಾಪ್ತಿಯಾಗಲಿದೆ ಎಚ್ಚರ. ಸಂಗಾತಿಯೊಂದಿಗೆ ಸಣ್ಣ ಪುಟ್ಟ ವಿಷಯಗಳಿಗೆ ಕದನ ಕಲಹ ದಂತಹ ವಿಷಯಗಳು ನಡೆಯಬಹುದು ಆದಷ್ಟು ತಾಳ್ಮೆ ಇರಲಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರೀತಿಯ ತಯಾರಿ ಹಾಗೂ ಗೆಲುವು ಸಾಧಿಸುವುದು ಕಂಡುಬರುತ್ತದೆ. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುವ ಸುಸಂದರ್ಭ ಎದುರಾಗಲಿದೆ. ಪ್ರೇಮಿಗಳಿಗೆ ಉತ್ತಮವಾದ ದಿನವಿದು.
ಧನಸ್ಸು ರಾಶಿ
ಮನಸ್ಸು ಚೈತನ್ಯವಾಗಿ ವರ್ತಿಸುತ್ತದೆ. ಈ ದಿನ ಆರೋಗ್ಯವಂತರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಹಲವು ಕಾರ್ಯಗಳಿಂದ ಪ್ರಸಿದ್ಧರಾಗುವಿರಿ. ಬಾಲ್ಯದ ಗೆಳೆಯರ ಭೇಟಿಯಿಂದ ಹಳೆಯ ನೆನಪುಗಳು ಮೆಲುಕು ಹಾಕುವ ಸಾಧ್ಯತೆ ಕಾಣಬಹುದು. ಕೆಲವೊಂದು ವಿವಾದಗಳನ್ನು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಮುಖ್ಯ. ಪತ್ನಿಯ ಮನೆತನದಿಂದ ನಿಮ್ಮ ಮುಂದಿನ ಯೋಜನೆಗಳಿಗೆ ಅನುಕೂಲ ಆಗುವ ಸಾಧ್ಯತೆ ಕಾಣಬಹುದು. ಪಿತ್ರಾರ್ಜಿತ ಆಸ್ತಿ ಗಳಲ್ಲಿ ನಿರೀಕ್ಷಿತವಾದ ಗೆಲುವು ನಿಮ್ಮ ಪಕ್ಷದಲ್ಲಿ.
ಮಕರ ರಾಶಿ
ಪರೋಪಕಾರದ ಗುಣ ಧರ್ಮದಿಂದ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ನಿಮ್ಮ ಸಹಾಯ ಉತ್ತಮ ರೀತಿಯಾಗಿದ್ದು ಆದರೆ ಅಪಾತ್ರರಿಗೆ ಮಾಡುವ ಸಹಾಯ ನಿಮಗೆ ಕೆಡುಕಾಗುವುದು ನಿಶ್ಚಿತ. ಲೇವಾದೇವಿ ವ್ಯವಹಾರಗಳಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಸಂಶೋಧನೆಗಳಲ್ಲಿ ಉತ್ತಮ ಪ್ರತಿಫಲ ಕಾಣಬಹುದಾದ ದಿನವಿದು. ಸೌಂದರ್ಯ ಮತ್ತು ಪ್ರಕೃತಿಯ ಆಸ್ವಾದನೆಗೆ ಒಳ್ಳೆಯ ಅನುಭವ ಪ್ರಾಪ್ತಿಯಾಗಲಿದೆ. ಈ ದಿನ ಬಾಕಿ ಕೆಲಸಗಳನ್ನು ಪೂರ್ಣ ಮಾಡುವ ತಯಾರಿ ನಡೆಸುತ್ತೀರಿ. ಬಿಡುವಿಲ್ಲದ ಶ್ರಮದಾಯಕ ಕೆಲಸಗಳಿಂದ ದೈಹಿಕ ಆಯಾಸ ಅನುಭವಿಸುವ ಸಾಧ್ಯತೆ ಕಂಡುಬರುತ್ತದೆ.
ಕುಂಭ ರಾಶಿ
ತೋರಿಕೆಯ ಜೀವನಶೈಲಿ ಅಥವಾ ಐಷಾರಾಮಿತನವನ್ನು ವ್ಯಕ್ತಪಡಿಸುವುದು ಸರಿಯಲ್ಲ. ನಿಮ್ಮ ಮಿತ್ರರು ಅಥವಾ ಸಂಬಂಧಿಕರಿಗೆ ಮಾತನಾಡುವ ವ್ಯವದಾನತೋರಿಸಿ. ಆರ್ಥಿಕವಾಗಿ ಉತ್ತಮ ರೀತಿಯ ವ್ಯವಹಾರ ಕೈಗೂಡಲಿದೆ. ಹೊಸ ವಾಹನ ಖರೀದಿಯ ಬಯಕೆ ಈಡೇರುವ ಸಾಧ್ಯತೆ ಕಾಣಬಹುದು. ಆತ್ಮೀಯ ವ್ಯಕ್ತಿಗಳಿಂದ ನಿಮ್ಮ ಯೋಜನೆಗಳಿಗೆ ಸಮಸ್ಯೆ ಬರಬಹುದಾದ ಸಾಧ್ಯತೆಗಳು ಕಂಡು ಬರುತ್ತದೆ. ವೈವಾಹಿಕ ಜೀವನದಲ್ಲಿ ಅದ್ಭುತವಾದ ಕ್ಷಣಗಳು ಕಾಣುವಿರಿ. ಸಂಗಾತಿ ಈ ದಿನ ನಿಮಗಾಗಿ ಉಡುಗೊರೆಯನ್ನು ನೀಡಲಿದ್ದಾರೆ.
ಮೀನ ರಾಶಿ
ಆಧ್ಯಾತ್ಮದತ್ತ ಒಲವು ಮೂಡಲಿದೆ. ದೈವಿಕ ಭಕ್ತಿ ಭಾವನೆಗಳು ನಿಮ್ಮಲ್ಲಿ ಕಂಡುಬರಲಿದೆ. ಕೆಲಸದಲ್ಲಿ ನಿರಾಸಕ್ತಿ ಒಳ್ಳೆಯದಲ್ಲ. ನಿಮಗೆ ನೀಡಿರುವ ಕೆಲಸವನ್ನು ನೀವೇ ಮಾಡಲು ಆದಷ್ಟು ಪ್ರಯತ್ನಪಡಿ ಇನ್ನೊಬ್ಬರನ್ನು ನಂಬುವುದು ಬೇಡ. ಆರ್ಥಿಕ ವ್ಯವಹಾರಗಳನ್ನು ಸರಿದೂಗಿಸುವ ವ್ಯವಸ್ಥೆ ಕಂಡುಬರುತ್ತದೆ. ಸಂಗಾತಿಯು ಉನ್ನತ ಯೋಜನೆಗಳಿಗೆ ತಯಾರಿ ನಡೆಸುವ ವ್ಯವಹಾರಗಳಿಗೆ ಉತ್ತಮ ಉಪಾಯಗಳನ್ನು ಮತ್ತು ಸಲಹೆಗಳನ್ನು ನೀಡಲಿದ್ದಾರೆ, ಇದನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.
PublicNext
22/01/2022 08:36 am