ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 28.12.2021

ಮೇಷ: ಸಾರ್ವಜನಿಕವಾಗಿ ಮನ್ನಣೆ. ಹೊರಜಗತ್ತಿನ ಕಗ್ಗಂಟು ಬಿಡಿಸುವ ಶಕ್ತಿ ನಿಮ್ಮಲ್ಲಿದೆ. ಕುಟುಂಬದೊಂದಿಗೆ ಸಮಯ ಕಳೆಯಿರಿ.

ವೃಷಭ: ಅನಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ. ಆಸ್ತಿ ವಿವಾದದ ಬಗ್ಗೆ ದುಡುಕಬೇಡಿ.

ಮಿಥುನ: ಮಕ್ಕಳ ಹೊಸ ವಿಚಾರಕ್ಕೆ ಪೋ›ತ್ಸಾಹ ನೀಡಿ. ಕುಟುಂಬದಿಂದ ಅನವಶ್ಯಕ ಧನವ್ಯಯ. ಹಳೆಯ ಸ್ನೇಹಿತನ ಮನೆಗೆ ಭೇಟಿ.

ಕಟಕ: ನಿಮ್ಮ ದುಡುಕು ಸ್ವಭಾವವನ್ನು ನಿಯಂತ್ರಿಸಿಕೊಳ್ಳಿ. ಗುರುಹಿರಿಯರ ಆಶೀರ್ವಾದ. ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸ.

ಸಿಂಹ: ಬದಲಾವಣೆಗೆ ಒಗ್ಗಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಿ. ಹಲವು ರೀತಿಯ ಕಾರ್ಯ ಒತ್ತಡ. ಅನಾರೋಗ್ಯ ಸಾಧ್ಯತೆ.

ಕನ್ಯಾ: ಹೊಸ ವಸ್ತು ಖರೀದಿಸುವಿರಿ. ಮೋಸ ಹೋಗುವ ಸಾಧ್ಯತೆಗಳಿವೆ. ಸಾರ್ವಜನಿಕ ಕ್ಷೇತ್ರದಲ್ಲಿ ತಾಳ್ಮೆಯಿಂದ ವರ್ತಿಸಿ.

ತುಲಾ: ನಿರೀಕ್ಷಿತ ಕಾರ್ಯ ಇಂದು ಸಂಪನ್ನವಾಗಲಿದೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ವೈದ್ಯರ ಸಲಹೆಯನ್ನು ಪಾಲಿಸಿ.

ವೃಶ್ಚಿಕ: ನಿಮ್ಮ ಜೀವನದ ಸಮಸ್ಯೆಗಳಿಗೆ ಹಿರಿಯರಿಂದ ಪರಿಹಾರ. ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಡಿ. ದಿನಾಂತ್ಯದಲ್ಲಿ ಶುಭ.

ಧನುಸ್ಸು: ಸಾರ್ವಜನಿಕ ರಂಗದಲ್ಲಿ ಆತ್ಮವಿಶ್ವಾಸದಿಂದ ವರ್ತಿಸಿ. ಕಲಾವಿದರಿಗೆ ವಿಶೇಷ ಅವಕಾಶ. ಅನಿರೀಕ್ಷಿತ ಧನಲಾಭ ಆಗಲಿದೆ.

ಮಕರ: ನಿಮ್ಮ ಹಲವು ಕೆಲಸಗಳಲ್ಲಿ ವಿಫಲತೆ ಕಾಡಲಿದೆ. ಜವಾಬ್ದಾರಿ ನಿರ್ವಹಿಸುವಲ್ಲಿ ಗೊಂದಲ. ದೊಡ್ಡ ಮೊತ್ತದ ನಷ್ಟವಾದೀತು.

ಕುಂಭ: ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಸ್ನೇಹಿತರ ಪ್ರಶಂಸೆ. ಪತ್ನಿಯೊಂದಿಗೆ ವಿಹಾರ. ರಾಜಕೀಯ ರಂಗದಲ್ಲಿದ್ದವರಿಗೆ ಯಶಸ್ಸು.

ಮೀನ: ದೀನ ದರಿದ್ರರಿಗೆ ಸಹಾಯ ಮಾಡಿ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ. ಮನೆಯಲ್ಲಿ ಸಡಗರದ ವಾತಾವರಣ.

Edited By : Nirmala Aralikatti
PublicNext

PublicNext

28/12/2021 07:08 am

Cinque Terre

23.77 K

Cinque Terre

0