ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 08.12.2021

ಮೇಷ: ತೊಂದರೆ ತಾಪತ್ರಯಗಳು ದೂರವಾಗಿ ಮಾನಸಿಕ ನೆಮ್ಮದಿ. ಗೆಳೆಯರೊಂದಿಗೆ ನಿಮ್ಮ ಸಂತೋಷವನ್ನು ಹಂಚಿಕೊಳ್ಳಿ.

ವೃಷಭ: ಹಿತಮಿತ ಮಾತುಗಳಿಂದ ಜನಮನವನ್ನು ಗೆಲ್ಲುತ್ತೀರಿ. ಜನಪ್ರತಿನಿಧಿಗಳಿಗೆ, ಮುಂದಾಳುಗಳಿಗೆ ವಿಶೇಷ ದಿನ. ತಾಳ್ಮೆ ಇರಲಿ.

ಮಿಥುನ: ಬಹುದಿನದ ಬಯಕೆಯನ್ನು ಕುಟುಂಬದೊಂದಿಗೆ ಸಮಾಲೋಚಿಸಿ. ವ್ಯಾಪಾರ ಆರಂಭಿಸಲು ದೃಢ ನಿರ್ಧಾರ ತೆಗೆದುಕೊಳ್ಳಿ.

ಕಟಕ: ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ನಿಮ್ಮ ಹಳೆಯ ಯೋಜನೆಯನ್ನು ಕಾರ್ಯಗತಗೊಳಿಸಿ. ಸ್ನೇಹಿತನ ಭೇಟಿ.

ಸಿಂಹ: ನಿಮ್ಮ ಪ್ರತಿಭೆಗೆವಿಶೇಷ ಪುರಸ್ಕಾರ. ಮಿತಿಮೀರಿದ ಉತ್ಸಾಹದಿಂದ ತೊಂದರೆಯಾಗಬಹುದು. ಯೋಚಿಸಿ ಮುನ್ನಡೆಯಿರಿ.

ಕನ್ಯಾ: ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದಲ್ಲಿ ಯಶಸ್ಸು. ಪ್ರಭಾವಿಗಳ ಜತೆ ಸಂಪರ್ಕ ಬೆಳೆಯುತ್ತದೆ. ಇತಿ-ಮಿತಿಯ ಅರಿವಿರಲಿ.

ತುಲಾ: ಉದ್ದಿಮೆಗಳಿಗೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಯ ಭೇಟಿ. ಅನಿರೀಕ್ಷಿತ ತಿರುವು. ಹಿರಿಯರ ಆರೋಗ್ಯದ ಕಡೆ ಗಮನ ವಹಿಸಿ.

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಅತ್ಯಂತ ಗಮನಾರ್ಹ ಸಾಧನೆ ನಿಮ್ಮದಾಗಲಿದೆ. ದೂರ ಪ್ರಯಾಣದ ಸಾಧ್ಯತೆ.

ಧನುಸ್ಸು: ಕುಟುಂಬದವರಿಗೆ ಭರವಸೆ ಮೂಡಿಸುವಿರಿ. ಚಲನಚಿತ್ರ ನಟರಿಗೆ ಅನಾರೋಗ್ಯದ ಸಾಧ್ಯತೆ. ಸಂಗೀತಗಾರರಿಗೆ ವಿಶೇಷ ದಿನ.

ಮಕರ: ಕೈಬಿಟ್ಟ ವ್ಯವಹಾರದಲ್ಲಿ ಅನಿರೀಕ್ಷಿತ ಯಶಸ್ಸು. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣಕಾಸಿನ ವಿಚಾರದಲ್ಲಿ ಅಡಚಣೆ.

ಕುಂಭ: ವಿದ್ಯಾಭ್ಯಾಸಿಗಳಿಗೆ ವಿಶೇಷ ಪ್ರಗತಿ. ಯೋಜಿತ ಕಾರ್ಯಗಳಲ್ಲಿ ಇದ್ದ ಆತಂಕ ದೂರ. ಹೃದಯ ತೊಂದರೆ ಬರುವ ಸಾಧ್ಯತೆ.

ಮೀನ: ಯಾವುದೇ ವಿಷಯದ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಹೊಸ ವ್ಯಾಪಾರವನ್ನು ಪ್ರಾರಂಭಿಸುವವರಿಗೆ ಶುಭದಿನ.

Edited By : Nirmala Aralikatti
PublicNext

PublicNext

08/12/2021 07:24 am

Cinque Terre

18.68 K

Cinque Terre

0