ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 16.2.2021

ಮೇಷ: ದೂರದ ಊರಿಂದ ನೆಂಟರ ಆಗಮನ. ಸ್ನೇಹಿತರೊಂದಿಗೆ ವಾಗ್ವಾದ. ಆಸ್ತಿ ವಿಚಾರದಲ್ಲಿ ಅಂತಿಮ ತೀರ್ಮಾನ.

ವೃಷಭ: ಕಲಾವಿದರಿಗೆ ಉತ್ತಮ ಅವಕಾಶ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಮನೆಯಲ್ಲಿ ಅಸಮಾಧಾನ.

ಮಿಥುನ: ಅಷ್ಟಮದ ಶನಿ ಅನಿರೀಕ್ಷಿತ ಆಘಾತಗಳಿಗೆ ಕಾರಣನಾದಾನು. ದುರ್ಗೆಯನ್ನು ಆರಾಧಿಸಿ. ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ.

ಕಟಕ: ಪತ್ನಿಯೊಂದಿಗೆ ವಿರಸ. ಮಕ್ಕಳ ವಿಚಾರದಲ್ಲಿ ಎಚ್ಚರ. ಹಿರಿಯರ ಸಲಹೆ ಪಡೆಯಿರಿ. ದಿನಾಂತ್ಯದಲ್ಲಿ ಉತ್ತಮ ಭೋಜನ.

ಸಿಂಹ: ಮಿತ್ರರೇ ಶತ್ರುಗಳು ಆಗಬಹುದು. ಮಹತ್ವದ ತೀರ್ಮಾನಕ್ಕೆ ಮನೆಯವರಿಂದ ವಿರೋಧ. ಸುಬ್ರಹ್ಮಣ್ಯನನ್ನು ಆರಾಧಿಸಿ.

ಕನ್ಯಾ: ನ್ಯಾಯಾಲಯದಲ್ಲಿ ಆಸ್ತಿ ವಿಚಾರಕ್ಕೆ ತೀರ್ಪು. ಕುಟುಂಬದೊಂದಿಗೆ ಚರ್ಚಿಸಿ ನಿರ್ಧರಿಸಿ. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ.

ತುಲಾ: ಮಕ್ಕಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ. ಕುಟುಂಬದಲ್ಲಿ ಅನಿರೀಕ್ಷಿತ ತಿರುವು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ನಿಂದನೆ.

ವೃಶ್ಚಿಕ: ಸಹೋದರರೊಂದಿಗೆ ಅಸಮಾಧಾನ. ಸಹೋದರಿಯರೊಂದಿಗೆ ಭೋಜನ. ಆತ್ಮೀಯ ಸ್ನೇಹಿತನಿಂದ ಸೂಕ್ತ ಸಲಹೆ.

ಧನುಸ್ಸು: ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು. ಅಪವ್ಯಯ ಮಾಡಬೇಡಿ. ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರ.

ಮಕರ: ಆರೋಗ್ಯ ಸಮಸ್ಯೆ ಉಲ್ಬಣ ಆಗಬಹುದು. ಆಹಾರ ಸೇವಿಸುವಾಗ ಹಿತವಾಗಿ ಮಿತವಾಗಿ ಇರಲಿ. ಧನ್ವಂತರಿಯನ್ನು ಭಜಿಸಿ.

ಕುಂಭ: ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ. ಸಂಗೀತಗಾರರಿಗೆ ವಿಶೇಷ ದಿನ. ಧನದ ಅಪವ್ಯಯವಾದೀತು, ಹುಷಾರು.

ಮೀನ: ಅನಪೇಕ್ಷಿತ ಘಟನೆಗಳು ನಡೆಯಬಹುದು. ಕುಟುಂಬದಲ್ಲಿ ಶುಭ ಕೆಲಸಕ್ಕೆ ಚಾಲನೆ. ಮಗಳ ಮದುವೆ ನಿಶ್ಚಯವಾಗಿ ಸಡಗರ.

Edited By : Nirmala Aralikatti
PublicNext

PublicNext

16/02/2021 07:24 am

Cinque Terre

31.82 K

Cinque Terre

1